ಕಾಣಿಯೂರು :ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ –ದೂರು

0

ಕಾಣಿಯೂರು: ಕಾಣಿಯೂರಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಘಟನೆ ನ.13 ರಂದು ನಡೆದಿದೆ.
ಕಾಣಿಯೂರಿನ ಪೈಕ ಪೆರಿಂಜೆ ಎಂಬಲ್ಲಿಗೆ ಹೊರ ರಾಜ್ಯದ ಕುಟುಂಬವೊಂದು ಕೂಲಿ ಕೆಲಸಕ್ಕೆ ಬಂದಿತ್ತು.ಈ ಕುಟುಂಬದ ಬಾಲಕಿಯೋರ್ವಳಿಗೆ ನಾಗೇಶ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಬಾಲಕಿಯ ತಂದೆ ಬೆಳ್ಳಾರೆ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದು.ಆರೋಪಿಯನ್ನು ಬಂಧಿಸಿದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here