ನ.23: ವಿವೇಕಾನಂದ ಕ.ಮಾ.ಶಾಲೆ ಶೇಷಾದ್ರಿ ಸಭಾಂಗಣದಲ್ಲಿ ಅನುಕಂಪಪೂರಿತ ಪಾಲನೆ, ಪೋಷಣೆ ಕಾರ್ಯಾಗಾರ

0

ಪುತ್ತೂರು: ಪಾಲಕರಾಗಿ ಮಕ್ಕಳ ಪಾಲನೆ ಮತ್ತು ಪೋಷಣೆಯ ಬಗ್ಗೆ ಮಕ್ಕಳ ಅಗತ್ಯ ಮತ್ತು ನಡತೆಯನ್ನು ತಿಳಿದು ಕೊಳ್ಳುವ ಸಹಿತ ಹಲವಾರು ಮಾಹಿತಿಗಳಿಗೆ ಸಂಬಂಧಿಸಿ ಯೋಗ ಪ್ರಾಣ ವಿದ್ಯಾ ಸಂಸ್ಥಾಪಕರಾಗಿರುವ ಭಾರತೀಯ ವಾಯು ಸೇನೆಯ ನಿವೃತ್ತ ವಿಂಗ್ ಕಮಾಂಡರ್ ಎನ್.ಜೆ.ರೆಡ್ಡಿ ಅವರಿಂದ ಅನುಕಂಪಪೂರಿತ ಪಾಲನೆ ಮತ್ತು ಪೋಷಣೆ ಕಾರ್ಯಾಗಾರ ನ.23ರಂದು ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶೇಷಾದ್ರಿ ಸಭಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ ಗಂಟೆ 9.30ಕ್ಕೆ ಕಾರ್ಯಾಗಾರ ನಡೆಯಲಿದ್ದು, ಮಕ್ಕಳ ಅಗತ್ಯ ಮತ್ತು ನಡತೆಯನ್ನು ತಿಳಿದುಕೊಳ್ಳುವ ರೀತಿ, ಹದಿಹರೆಯದವರ ಜೊತೆ ಮಾತನಾಡುವಾಗ ನಮ್ಮ ಭಾವನೆಗಳನ್ನು ನಿರ್ವಹಿಸಬೇಕಾದ ರೀತಿ, ವಿದ್ಯಾರ್ಥಿಗಳನ್ನು ಸಬಲೀಕರಿಸಲು ಮತ್ತು ಯಶಸ್ವಿಗೊಳಿಸಲು ತಂತ್ರಗಳು, ಮಕ್ಕಳನ್ನು ಕೆಟ್ಟ ಅಭ್ಯಾಸಗಳಿಂದ ದೂರ ಮಾಡುವ ರೀತಿಗಳು, ಮಕ್ಕಳ ನಿಸರ್ಗದತ್ತ ಮತ್ತು ವಿಶಿಷ್ಟ ಸಾಮರ್ಥ್ಯಗಳನ್ನು ಪೋಷಿಸಿ ಬಲಗೊಳಿಸುವ ರೀತಿ, ಇತರರ ಜೊತೆ ಮಕ್ಕಳು ಸಾಮರಸ್ಯದ ಮತ್ತು ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವ ರೀತಿ, ಮಕ್ಕಳು ಗಮನವಿಟ್ಟು ಆಲಿಸುವಂತೆ ಮಾಡುವ ರೀತಿಯ ಕುರಿತು ವಿಶೇಷ ಕಾರ್ಯಾಗಾರ ನಡೆಯಲಿದೆ. ಕಾರ್ಯಗಾರಕ್ಕೆ ರೂ.500 ಪ್ರವೇಶ ಶುಲ್ಕ ವಿಧಿಸಲಾಗಿದ್ದು, ಆಸಕ್ತರು ರಾಮಗೊಪಾಲ ಮೊ: 9448620704, ಪೂರ್ಣಿಮಾ ಮೊ: 9481921004, ವಿನುತಾ ಮೊ: 8105353360 ಅವರನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here