ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಆಶ್ರಯದಲ್ಲಿ ಸರ್ವೆ ಗ್ರಾಮದ ರೆಂಜಲಾಡಿ ಅಂಗನವಾಡಿ ಕೇಂದ್ರದ ವಠಾರ ಮತ್ತು ಸುತ್ತಮುತ್ತ ಬೆಳೆದಿದ್ದ ಹುಲ್ಲು, ಪೊದೆ, ಗಿಡಗಂಟಿಗಳನ್ನು ಶ್ರಮದಾನದ ಮೂಲಕ ತೆರವೊಗಿಳಿಸಿ ಸ್ವಚ್ಛಗೊಳಿಸಲಾಯಿತು. ಸ್ವಸ್ತಿಕ್ ಗೆಳೆಯರ ಬಳಗದವ ಸ್ವಚ್ಚತಾ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೆಳೆಯರ ಬಳಗದ ಗೌರವಧ್ಯಾಕ್ಷರಾದ ಸುಂದರ ಬಲ್ಯಾಯ, ಗೌರವ ಸಲಹೆಗಾರರಾದ ಪದ್ಮಯ್ಯ ನಾಯ್ಕ, ಸದಸ್ಯರಾದ ಸುಬ್ರಹ್ಮಣ್ಯ ಶರತ್, ದೀಕ್ಷಿತ್ ಬಲ್ಯಾಯ, ಜಗದೀಶ್ ಬಾಳಾಯ, ಚೇತನ್ ಕಲ್ಪಣೆ, ಬಾಲಚಂದ್ರ ನಾಯ್ಕ, ಹೇಮಚಂದ್ರ ನಾಯ್ಕ, ಅನಿಲ್ ಕುಮಾರ್, ಮೋಹನ ನೆಕ್ಕಿಲು, ಭರತ್ ನೆಕ್ಕಿಲು, ಪ್ರದೀಪ್ ನೆಕ್ಕಿಲು, ಮೋಕ್ಷಿತ್ ಬಲ್ಯಾಯ ಮೊದಲಾದವರು ಭಾಗವಹಿಸಿದ್ದರು.
ಸ್ತ್ರೀ ಶಕ್ತಿ ಸಂಘದಿಂದ ಉಪಹಾರದ ವ್ಯವಸ್ಥೆ ಮಾಡಿದ್ದರು. ಅಂಗನವಾಡಿ ಕೇಂದ್ರದ ಸಹಾಯಕಿ ಭವಾನಿ ಹಾಗೂ ಲಲಿತ, ಲಕ್ಷ್ಮೀ, ಗೀತ ಸಹಕರಿಸಿದರು.