ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ದೀಪಾವಳಿ ಆಚರಣೆ

0

ಉಪ್ಪಿನಂಗಡಿ: ದೀಪಾವಳಿ ಹಬ್ಬದ ಕೊನೆಯ ದಿನವಾದ ಮಂಗಳವಾರದಂದು ಇಲ್ಲಿನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹಣತೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ “ಗ್ರಾಮ ದೀಪಾವಳಿ” ಹಬ್ಬವನ್ನು ಸೌಹಾರ್ದಪೂರ್ಣವಾಗಿ ಆಚರಿಸಲಾಯಿತು.


ಪಂಚಾಯತ್ ಸದಸ್ಯ ಯು.ಟಿ. ತೌಶಿಫ್ ಗ್ರಾಮದ ಎಲ್ಲರೂ ಭಾಗವಹಿಸಿ ದೀಪಾವಳಿಯನ್ನು ಆಚರಿಸುವಂತಾಗಬೇಕೆಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ ಪಂಚಾಯತ್ ಆಡಳಿತ ದೀಪಾವಳಿಯ ಕೊನೆಯ ದಿನದಂದು ಗ್ರಾಮದ ಜನತೆಯ ಭಾಗೀಧಾರಿಕೆಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ನಿರ್ಧರಿಸಿತ್ತು. ಅದರಂತೆ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ರವರ ನೇತೃತ್ವದಲ್ಲಿ ಹಣತೆಗಳನ್ನು ಕ್ರೂಢೀಕರಿಸಿ ಪಂಚಾಯತ್ ಕಟ್ಟಡದ ಮೂರು ಹಂತಗಳಲ್ಲಿ ಹಣತೆಗಳನ್ನು ಬೆಳಗಿಸಿ ಸಂಭ್ರಮಿಸಲಾಯಿತು.
ಪಂಚಾಯತ್ ಸದಸ್ಯ ವಿನಾಯಕ ಪೈ, ಯು.ಟಿ. ತೌಸೀಫ್ ಮುಂದಾಳತ್ವದಲ್ಲಿ ಚಿತ್ತಾಕರ್ಷಕ ಸುಡು ಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಆಗಮಿಸಿದವರಿಗೆ ಸಿಹಿತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತ, ಸದಸ್ಯರಾದ ಧನಂಜಯ , ಸುರೇಶ್ ಅತ್ರಮಜಲು, ಅಬ್ದುಲ್ ರಶೀದ್, ಸಂಜೀವ ಮಡಿವಾಳ, ನೆಬಿಸ ಮತ್ತು ಗ್ರಾ.ಪಂ. ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಸಿಬ್ಬಂದಿ, ಗ್ರಾಮಸ್ಥರಾದ ವಿಜೇತ, ನಾಗೇಶ್ ಪ್ರಭು, ಬಿಪಿನ್, ಇಬ್ರಾಹಿಂ ಆಚಿ, ಜಮಾಲ್ ಕೆಂಪಿ ಮಜಲು, ಭಾರತಿ ಮಹಾಲಿಂಗ, ಇಲ್ಯಾಸ್ ಕರಾಯ, ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಠಾಣೆಯಲ್ಲೂ ಸಂಭ್ರಮದ ದೀಪಾವಳಿ:
ಪಂಚಾಯತ್ ಕಚೇರಿಯ ಸನಿಹದಲ್ಲಿರುವ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲೂ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹಾಗೂ ಉಪ ನಿರೀಕ್ಷಕ ಕೆ.ವಿ. ರಾಜೇಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಣತೆಗಳನ್ನು ಬೆಳಗಿಸಿ, ಹಸಿರು ಸುಡು ಮದ್ದು ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ತನ್ಮೂಲಕ ಕರ್ತವ್ಯದ ಕಾರಣದಿಂದ ಮನೆ ಮಂದಿಯಿಂದ ದೂರವಿರಬೇಕಾದ ಪೊಲೀಸ್ ಸಿಬ್ಬಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರ್ರಮಿಸಲು ಅವಕಾಶ ಕಲ್ಪಿಸಿದಂತಾಗಿತ್ತು.

LEAVE A REPLY

Please enter your comment!
Please enter your name here