ಇಂದು(ನ.16):ಗೆಜ್ಜೆಗಿರಿ ದ್ವಿತೀಯ ವರ್ಷದ ಪ್ರಥಮ ದೇವರ ಸೇವೆಯಾಟ

0

ಬಡಗನ್ನೂರುಃ ಶ್ರೀ ಅದಿ ಧೂಮಾವತಿ ಶ್ರೀ ದೇಯಿಬೈದೇತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ ಸ್ಥಾನ ಗೆಜ್ಜೆಗಿರಿ, ಇದರ ದ್ವೀತಿಯ ವರ್ಷದ ಪ್ರಥಮ ಸೇವೆಯಾಟ ನ.16 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯಲಿದೆ.ಮಧ್ಯಾಹ್ನ ಮಹಾಪೂಜೆ,ಸಂಜೆ ಗಂ 4 ರಿಂದ ಭಜನಾ ಸಂಕೀರ್ತನೆ,  6.25 ಕ್ಕೆ ಗೆಜ್ಜೆ ಮೂಹುರ್ತ, ಚೌಕಿಪೂಜೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 

ರಾತ್ರಿ 7.30 ರಿಂದ ಪ್ರಥಮ ದೇವರ ಸೇವೆಯಾಟ  ಅಶ್ವಮೇಧ  ನೂತನ ನವರಸಭರಿತ  ಹಾಸ್ಯ ಪ್ರಧಾನ ತುಳು ಸಾಮಾಜಿಕ ಪ್ರಸಂಗ ಮನ್ಮಥ ಸುಂದರಿ ಆಡಿತೋರಿಸಲಿದ್ದಾರೆ. ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ  ಶ್ರೀ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಪೀತಾಂಬರ ಹೆರಾಜೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here