ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೊಡಿಯಾಲ್ಬೈಲು, ಮಂಗಳೂರು ದ.ಕ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ನ. 10ರಂದು ಆಯೋಜಿಸಿತ್ತು. ಗುಂಪು ವಿಭಾಗದಲ್ಲಿ ಅವನಿ ರೈ (9ನೇ) ಮತ್ತು ಅನಿಶಾ ಜಿ.ಎ (9ನೇ) ’ಲಿಕ್ವಿಡ್ ಟ್ರೀ’ ಎಂಬ ಮಾದರಿಯನ್ನು ಪ್ರದರ್ಶಿಸಿದರು. ಈ ಮಾದರಿಯು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತದೆ. ಈ ಮಾದರಿಗೆ ವಿಜ್ಞಾನ ಶಿಕ್ಷಕಿಯರಾದ ರೇಖಾಮಣಿ ಮತ್ತು ಶಾರದಾ. ಪಿ ರವರು ಮಾರ್ಗದರ್ಶನ ನೀಡಿರುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ರವರು ಅಭಿನಂದನೆಗಳೊಂದಿಗೆ ಶುಭಹಾರೈಸಿದ್ದಾರೆ.