ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕೊಲೆ ಪ್ರಕರಣ-ಎಸ್‌ಪಿಪಿ ನೇಮಿಸಲು ಮನವಿ

0

ಶಿವಪ್ರಸಾದ್ ಆಳ್ವ, ಮಹೇಶ್ ಕಜೆ, ವೆಂಕಪ್ಪ ಗೌಡ ಹೆಸರು ಉಲ್ಲೇಖ-ಮೃತನ ತಂದೆಯಿಂದ ರಾಜ್ಯ ಗೃಹ ಇಲಾಖೆಗೆ ಮನವಿ

ಪುತ್ತೂರು: ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಪ್ರಖ್ಯಾತಿ ಪಡೆದಿರುವ ಕಲ್ಲೇಗ ಟೈಗರ್ಸ್‌ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ(26ವ)ರವರನ್ನು ನ.6ರಂದು ರಾತ್ರಿ ನೆಹರೂನಗರದಲ್ಲಿ ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.


ಅಕ್ಷಯ್ ಕಲ್ಲೇಗ ಅವರ ತಂದೆ ಕಬಕ ಗ್ರಾಮದ ಶೇವಿರೆ ನಿವಾಸಿ ಚಂದ್ರಶೇಖರ ಗೌಡರವರು ರಾಜ್ಯ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದು ತನ್ನ ಪುತ್ರನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆ ಪರ ಸಮರ್ಪಕವಾಗಿ ವಾದ ಮಂಡನೆ ಮಾಡಲು ಸರಕಾರಿ ಅಭಿಯೋಜಕರ ಜತೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಽಕಾರಿಯಾಗಿರುವ ಮತ್ತು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಕೆ. ಶಿವಪ್ರಸಾದ್ ಆಳ್ವ, ಪುತ್ತೂರಿನ ಖ್ಯಾತ ಕ್ರಿಮಿನಲ್ ನ್ಯಾಯವಾದಿಯೂ ಇ.ಡಿ. ಪರ ವಿಶೇಷ ಸರಕಾರಿ ಅಭಿಯೋಜಕರೂ ಆಗಿರುವ ಕಜೆ ಲಾ ಚೇಂಬರ‍್ಸ್ ಮುಖ್ಯಸ್ಥ ಮಹೇಶ್ ಕಜೆ ಮತ್ತು ಕಾಂಗ್ರೆಸ್ ಮುಖಂಡರೂ ಆಗಿರುವ ಸುಳ್ಯದ ನ್ಯಾಯವಾದಿ ಮಾಚಿಲ ವೆಂಕಪ್ಪ ಗೌಡರವರ ಹೆಸರನ್ನು ಉಲ್ಲೇಖಿಸಿ ಅಕ್ಷಯ್ ಕಲ್ಲೇಗ ಅವರ ತಂದೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದು ಈ ಮೂವರು ಪ್ರಭಾವಿ ವಕೀಲರ ಪೈಕಿ ಓರ್ವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಸರಕಾರ ನೇಮಿಸುವ ಸಾಧ್ಯತೆ ಇದೆ. ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕವಾಗುವ ವಕೀಲರೊಂದಿಗೆ ಪ್ರಸ್ತುತ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಸರಕಾರಿ ಅಭಿಯೋಜಕರಾಗಿರುವ ಕುಂದಾಪುರ ನಿವಾಸಿ ಜಯಂತಿ ಕೆ.ರವರು ಕೈ ಜೋಡಿಸಲಿದ್ದಾರೆ.


ಆರೋಪಿಗಳ ಪರ ನರಸಿಂಹಪ್ರಸಾದ್?:
ಅಕ್ಷಯ್ ಕಲ್ಲೇಗರವರನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಽತರಾಗಿ ನ್ಯಾಯಾಂಗ ಬಂಧನದಲ್ಲಿರುವ ಬನ್ನೂರು ದಾರಂದಕುಕ್ಕು ನಿವಾಸಿ ಮನೀಶ್, ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರಿನ ಮಂಜುನಾಥ್ ಮತ್ತು ಪಡೀಲು ನಿವಾಸಿ ಕೇಶವರವರ ಪರ ಪುತ್ತೂರಿನ ವಕೀಲ ಬಿ. ನರಸಿಂಹ ಪ್ರಸಾದ್ ಅವರು ವಕಾಲತ್ತು ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here