





ಪುತ್ತೂರು: ದ.ಕ.ಜಿಲ್ಲಾ ವ್ಯಾಪ್ತಿಯ ಸಹಕಾರ ಸಂಸ್ಥೆ ಯಾಗಿರುವ ಆದರ್ಶ ವಿವಿದೋದ್ಧೇಶ ಸಹಕಾರ ಸಂಸ್ಥೆಗೆ ಸಹಕಾರ ಸಪ್ತಾಹದ ಅಂಗವಾಗಿ ಕೊಡಲ್ಪಡುವ ದ.ಕ.ಜಿಲ್ಲೆಯ ಉತ್ತಮ ವಿವಿದೋದ್ಧೇಶ ಸಹಕಾರ ಸಂಘ ಪ್ರಶಸ್ತಿ ದೊರೆತಿದೆ. ನ.18ರಂದು ಮಂಗಳೂರಿನಲ್ಲಿ ಜರಗಿದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣರವರು ಆದರ್ಶ ವಿವಿದೋದ್ಧೇಶ ಸಹಕಾರ ಸಂಸ್ಥೆಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ . ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು. ಆದರ್ಶ ವಿವಿದೋದ್ಧೇಶ ಸಹಕಾರ ಸಂಘದ ಮುಖ್ಯ ಪ್ರಬಂಧಕ ವಸಂತ್ ಜಾಲಾಡಿ ಹಾಗೂ ನಿರ್ದೇಶಕರು ಭಾಗವಹಿಸಿದರು.
















