ಕೋಡಿಂಬಾಳ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೊಲೋರೋ

0

ಕಡಬ: ಇಲ್ಲಿನ ಕಡಬ ಪಂಜ ರಸ್ತೆಯ ಕೋಡಿಂಬಾಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವಾಹನದಲ್ಲಿದ್ದವರು ಪವಾಡ ಸದೃಶವಾಗಿ ಪಾರಾದ ಘಟನೆ ನ.19ರ ಮುಂಜಾನೆ ನಡೆದಿದೆ.
ಸುಳ್ಯ ತಾಲೂಕು ಕಲ್ಲುಗುಂಡಿಯ ಚೇತನ್ ಎಂಬವರ ಕುಟುಂಬಸ್ಥರು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳ ಕ್ಕೆ ತೆರಳುತ್ತಿದ್ದಾಗ ಕೋಡಿಂಬಾಳದಲ್ಲಿ ವಾಹನ ಅಪಘಾತವಾಗಿದೆ. ವಾಹನದಲ್ಲಿ ಮಗು ಸಹಿತ ಮೂರು ಮಂದಿ ಇದ್ದು ಜೀವ ಹಾನಿಯಿಂದ ಪಾರಾಗಿದ್ದಾರೆ. ವಾಹನ ಜಖಂ ಗೊಂಡಿದ್ದು ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ.ಸ್ಥಳೀಯರು ಕೂಡಲೇ ಆಗಮಿಸಿ ವಾಹನದಲ್ಲಿದ್ದವರನ್ನು ಉಪಚರಿಸಿದ್ದಾರೆ.

LEAVE A REPLY

Please enter your comment!
Please enter your name here