ಕಂಬಳಬೆಟ್ಟು: ಕಾರು-ದ್ವಿಚಕ್ರ ವಾಹನದ ಮಧ್ಯೆ ಅಪಘಾತ – ಮಹಿಳೆಗೆ ಗಾಯ

0

ವಿಟ್ಲ: ಕಾರು ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದ ಘಟನೆ ವಿಟ್ಲ- ಪುತ್ತೂರು ರಸ್ತೆಯ ಕಂಬಳಬೆಟ್ಟು ಸಮೀಪದ ಕಾರ್ಯಾಡಿ ಸಮೀಪ ನಡೆದಿದೆ.
ಘಟನೆಯಿಂದ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.

ಕಾರು ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದು, ಮಹಿಳೆ ಒಳರಸ್ತೆಯಿಂದ ಕಾರ್ಯಾಡಿ ಸಮೀಪ ಮುಖ್ಯ ರಸ್ತೆಗೆ ಸಂಪರ್ಕಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಯಿಂದಾಗಿ ಮಹಿಳೆಗೆ ಗಾಯವಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

LEAVE A REPLY

Please enter your comment!
Please enter your name here