ಸುಬ್ರಹ್ಮಣ್ಯದಲ್ಲಿ ನೃತ್ಯೋಪಾಸನಾ ತಂಡದ ‘ನೃತ್ಯೋಹಂ’ ನೃತ್ಯ ವೈಭವ

0

ಪುತ್ತೂರು:ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಬ್ರಹ್ಮಣ್ಯ ಶಾಖೆಯ ಕಲಾತಂಡದಿಂದ `ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ ನ.18ರಂದು ಕುಕ್ಕೆ ಸುಬ್ರಮಣ್ಯ ವನದುರ್ಗಾದೇವಿ ಸಭಾಂಗಣದಲ್ಲಿ ನಡೆಯಿತು.

ಶ್ರೀ ಸುಬ್ರಹ್ಮಣ್ಯ ಮಠದ ಸುದರ್ಶನ ಜೋಯಿಸರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ, ಸನಾತನ ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಸ್ಟ್ರೀಯ ಕಾರ್ಯಕ್ರಮಗಳು ಅನಿವಾರ್ಯ.ಪ್ರಸ್ತುತ ಪಾಶ್ಚಾತ್ಯ ನೃತ್ಯ ಹಾಗೂ ಸೀರಿಯಲ್‌ಗಳ ಭರಾಟೆಯ ನಡುವೆ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು ಎಂದು ಆಶಿಸಿದರು.ಇದೇ ಸಂದರ್ಭ ಕಲಾ ಕೇಂದ್ರದ ವತಿಯಿಂದ ಚೈತನ್ಯ ಹಾಗೂ ಮೇಘನಾ ಎಂಬ ವಿದ್ಯಾರ್ಥಿಗಳನ್ನು ನೃತ್ಯ ಪೋಷಣ ಕಾರ್ಯಕ್ರಮದಲ್ಲಿ ಉಚಿತ ಶಿಕ್ಷಣಕ್ಕೆ ದತ್ತು ಪಡೆಯಲಾಯಿತು.ಭರತನಾಟ್ಯ ಜೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೆರವೇರಿಸಲಾಯಿತು.

ನೃತ್ಯೋಹಂ ಅಂಗವಾಗಿ ಸುಬ್ರಹ್ಮಣ್ಯ ಕಲಾತಂಡದ ವಿದ್ಯಾರ್ಥಿಗಳು ನೃತ್ಯ ಕೇಂದ್ರದ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ಭರತನಾಟ್ಯ ಸಮೂಹ ನೃತ್ಯ ಪ್ರದರ್ಶಿಸಿದರು. ನಟವಾಂಗದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ ವಿದ್ವಾನ್ ಗೀತೇಶ್ ನೀಲೇಶ್ವರ ಹಾಗೂ ವಯಲಿನಲ್ಲಿ ವಿದ್ವಾನ್ ಬಾಲರಾಜ್ ಕಾಸರಗೋಡು ಸಹಕರಿಸಿದರು.ಕಲಾ ಕೇಂದ್ರದ ಟ್ರಸ್ಟಿ, ಹಿರಿಯ ಪತ್ರಕರ್ತ ಆತ್ಮಭೂಷಣ್ ಇದ್ದರು.ಶಿಕ್ಷಕ ಶಶಿಕಾಂತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here