ಬೆಂಗಳೂರಿನಲ್ಲಿರುವ ಸುಳ್ಯ, ಪುತ್ತೂರು, ಬೆಳ್ತಂಗಡಿ – ದ.ಕ ಜಿಲ್ಲೆಯವರೇ…-ಬೆಂಗಳೂರಿನಲ್ಲಿ ಅಲ್ಲಲ್ಲಿ ‘ಸುದ್ದಿ ಸೆಂಟರ್’ಗಳ ಪ್ರಾರಂಭಕ್ಕೆ, ಸುದ್ದಿಮಾಧ್ಯಮದ ವಿಸ್ತರಣೆಗೆ ಯೋಜನೆ

0

ಈ ಹಿಂದೆ ಬರೆದಂತೆ ಸುದ್ದಿ ಬಿಡುಗಡೆ ಪತ್ರಿಕೆ 1985ರಲ್ಲಿ ಪ್ರಾರಂಭವಾದಲ್ಲಿಂದ ಕೊರೋನಾದ ಅವಧಿಯವರೆಗೆ ಬೆಂಗಳೂರಿನಲ್ಲಿ ಸುದ್ದಿ ಸೆಂಟರ್, ಸುದ್ದಿ ಪತ್ರಿಕೆ, ಸುದ್ದಿ ವೆಬ್‌ಸೈಟ್, ಸುದ್ದಿ ಚಾನೆಲ್ ಊರಿನ ಜನರ ಮಾಹಿತಿ, ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡುತ್ತಿತ್ತು. ಇಂದಿನ ತಂತ್ರಜ್ಞಾನದಿಂದಾಗಿ ಜನರ ನಡುವೆ ಸಂವಹನ, ಸಂಪರ್ಕವಿದ್ದರೂ ಸುದ್ದಿ ಸೆಂಟರ್ ಅದನ್ನು ಉಪಯೋಗಿಸಿಕೊಂಡು ಊರಿನ ಮತ್ತು ಬೆಂಗಳೂರಿನಲ್ಲಿರುವ ಊರಿನವರ ನಡುವೆ ವಿಶ್ವಾಸದ ಸೇವೆಯ ಸಂಬಂಧವನ್ನು ಬೆಳೆಸುವ ಯೋಜನೆ ಇಟ್ಟುಕೊಂಡಿದ್ದೇವೆ. ಸುದ್ದಿಗೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪತ್ರಿಕಾ ವಿತರಕರು ಇದ್ದಾರೆ. ಗ್ರಾಮ ಗ್ರಾಮಗಳಲ್ಲಿ ಪ್ರತಿನಿಧಿಗಳು ಇದ್ದಾರೆ, ಸೇವೆ ನೀಡುವ ಸೆಂಟರ್‌ಗಳೂ ಇವೆ. ಬಂಟ್ವಾಳ, ಮಂಗಳೂರಿನಲ್ಲಿ ಕೂಡ ಸುದ್ದಿಗೆ ಪ್ರತಿನಿಧಿಗಳು ಇದ್ದಾರೆ ಮತ್ತು ಕಛೇರಿಗಳೂ ಇವೆ. ಈ ನೆಟ್‌ವರ್ಕನ್ನು ಮತ್ತು ಸುದ್ದಿ ಮಾಧ್ಯಮವನ್ನು ಇಡೀ ದ.ಕ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ವಿಸ್ತರಿಸಬೇಕೆಂದಿದ್ದೇವೆ. ಮಳೆ ಕೊಯ್ಲು, ಸೌರಶಕ್ತಿಯಿಂದ ವಿದ್ಯುತ್, ಉದ್ಯೋಗ, ಶಿಕ್ಷಣದ ಮತ್ತು ವಿವಿಧ ಸೇವೆಗಳ ಮಾಹಿತಿ ಜನರಿಗೆ ಒದಗಿಸಲು ಇದು ಸಹಾಯ ಮಾಡಲಿದೆ. ಕೃಷಿಕರ ಸೇವಾ ಕೇಂದ್ರ (ಅರಿವು ಕೃಷಿ ಕ್ಲಿನಿಕ್) ಮೂಲಕ ಕೃಷಿಕರಿಗೆ ಮಾರುಕಟ್ಟೆ, ತರಬೇತಿ ಮತ್ತು ಮಾಹಿತಿ ಒದಗಿಸಲು ಇದರಿಂದ ಪ್ರಯೋಜನವಾಗಲಿದೆ.


ಈ ಮೇಲಿನ ವ್ಯವಸ್ಥೆಯನ್ನು ಮತ್ತು ಸುದ್ದಿ ಪತ್ರಿಕೆ, ವೆಬ್ ಸೈಟ್, ಸುದ್ದಿ ನ್ಯೂಸ್ ಚಾನೆಲ್ ಮಾಧ್ಯಮದ ವ್ಯವಸ್ಥೆಗಳನ್ನು ಬೆಂಗಳೂರಿಗೆ ವಿಸ್ತರಿಸುವ ಯೋಜನೆ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸುದ್ದಿ ಸೆಂಟರ್‌ಗಳನ್ನು ತೆರೆದು ಆ ಊರಿನಲ್ಲಿರುವ ದ.ಕ ಜಿಲ್ಲೆಯವರ ಸಂಪರ್ಕವನ್ನು ಪಡೆಯಲಿದ್ದೇವೆ. ಅವರಿಗೆ ಸೇವೆ ನೀಡುವುದಲ್ಲದೆ ಊರಿನಿಂದ ಬೆಂಗಳೂರಿಗೆ ಬರುವವರಿಗೆ ಅಗತ್ಯದ ಸೇವೆ ಸುದ್ದಿ ಸೆಂಟರ್‌ಗಳಲ್ಲಿ ದೊರಕಲಿದೆ. ದ.ಕ ಜಿಲ್ಲೆಯ ಆಯಾ ತಾಲೂಕಿನ ಪ್ರಮುಖರ, ಸಮಾಜ ಸೇವಕರ ಸಂಪರ್ಕದಿಂದ ಬೆಂಗಳೂರಿಗೆ ಬರುವ ಊರಿನವರಿಗೆ ಮಾಹಿತಿ ಮತ್ತು ಸೇವೆ ದೊರಕುವಂತೆ ಮಾಡುವುದಲ್ಲದೆ ಊರಿನ ಅಭಿವೃದ್ಧಿಗೂ ಬೆಂಗಳೂರಿನಲ್ಲಿರುವ ದ.ಕ.ಜಿಲ್ಲೆಯವರ ಪ್ರೋತ್ಸಾಹವನ್ನು ಪಡೆಯಲಿದ್ದೇವೆ. ಸುದ್ದಿ ಮಾಧ್ಯಮವು ಅದಕ್ಕೆ ಬೆಂಗಾವಲಾಗಿ ಕೆಲಸ ಮಾಡಲಿದೆ. ಅದು ಈ ಎಲ್ಲಾ ಯೋಜನೆಗಳಿಗೆ ಬೆಂಬಲ ಮತ್ತು ಚಾಲನೆ ನೀಡಲಿ ಎಂದು ಹಾರೈಸುತ್ತಿದ್ದೇನೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ತುಳು ಒಕ್ಕೂಟದ 50ನೇ ವರ್ಷದ ಕಾರ್ಯಕ್ರಮ ಮತ್ತು ಬೆಂಗಳೂರಿನಲ್ಲಿ ನಡೆಯುವ ನಮ್ಮೂರಿನ ಕಂಬಳ ಯಶಸ್ವಿಯಾಗಿ ನಡೆಯಲಿ. ಅದರ ಯಶಸ್ವಿಗಾಗಿ ಬೆಂಗಳೂರು ಕಂಬಳದ ನೇರ ಪ್ರಸಾರವನ್ನು ಮಾಡಲಿದ್ದೇವೆ. ವಿಶೇಷ ಸಂಚಿಕೆಯನ್ನೂ ಹೊರತರಲಿದ್ದೇವೆ.

LEAVE A REPLY

Please enter your comment!
Please enter your name here