ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯಕ್ಷೇತ್ರ ನೆಲ್ಯಾಡಿ ಇಲ್ಲಿ ಕುಟ್ರುಪ್ಪಾಡಿ ಹಾಗೂ ಉದನೆ ಫೋರೋನಗಳ ಸಂಡೆ ಸ್ಕೂಲ್‌ನ ಅಧ್ಯಾಪಕರಿಗೆ ಒಂದು ದಿನದ ಕಲಿಕಾ ತರಬೇತಿ ಕಾರ್ಯಗಾರ ನ.19ರಂದು ನಡೆಯಿತು.
ಕಾರ್ಯಗಾರವನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮೋಪದೇಶ ಕೇಂದ್ರದ ನಿರ್ದೇಶಕ ವಂದನೀಯ ಫಾ.ಟೊಮಿ ಮಟ್ಟಮ್ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಕೇವಲ ಪುಸ್ತಕದಲ್ಲಿನ ಮಾಹಿತಿ ಓದಿ ಹೇಳುವ ವ್ಯಕ್ತಿಗಳಲ್ಲ. ಅವರು ವಿಚಾರಗಳ ಜೊತೆಯಲ್ಲಿ ಬದುಕನ್ನು ಕಟ್ಟುವ ಶಿಲ್ಪಿಗಳಾಗಿ ಬದಲಾವಣೆ ಹೊಂದಬೇಕೆಂದು ಹೇಳಿದರು. ತರಬೇತಿಯನ್ನು ಬೋನಿಪಾಲ ಅವರು ನೀಡಿದರು. ವಿವಿಧ ಚಟುವಟಿಕೆಗಳ ಮೂಲಕ ಅಧ್ಯಾಪನ ಆಸಕ್ತಿದಾಯಕವಾಗುವಂತೆ ತರಬೇತಿ ನೀಡಿದರು. ಧರ್ಮಗುರು ವಂದನಿಯ ಫಾ.ಶಾಜಿ ಮ್ಯಾಥ್ಯು ಸ್ವಾಗತಿಸಿದರು. ಮುಖ್ಯಶಿಕ್ಷಕ ರೊಯ್ ಕಾರ್ಯಕ್ರಮ ನಿರೂಪಿಸಿದರು.