ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂದಾರರಿಗೆ ಕುಂಬ್ರ ವರ್ತಕರ ಸಂಘದಿಂದ ಸನ್ಮಾನ

0

ಪುತ್ತೂರು: ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಭೂಮಿ ಕಲಾವಿದ, ರಂಗದ ರಾಜೆ ಸುಂದರ ರೈ ಮಂದಾರರವರಿಗೆ ಕುಂಬ್ರ ವರ್ತಕರ ಸಂಘದಿಂದ ಸನ್ಮಾನ ಮಾಡಲಾಯಿತು. ಮಂದಾರರವರ ನಿವಾಸಕ್ಕೆ ತೆರಳಿದ ವರ್ತಕರ ಬಳಗ ಮಂದಾರರವರನ್ನು ಶಾಲು,ಸ್ಮರಣಿಕೆ,ಫಲಪುಷ್ಪ ಹಾಗೂ ಉಡುಗೊರೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳರವರು, ಮಂದಾರರವರು ನಮ್ಮ ಕಣ್ಣೇದುರಲ್ಲೇ ಒಬ್ಬ ಕಲಾವಿದನಾಗಿ ಬೆಳೆದು ನಮ್ಮೂರಿಗೆ ಕೀರ್ತಿ ತಂದುಕೊಟ್ಟವರು. ಅವರು ನಮ್ಮವರು ಎಂದು ಹೇಳಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ನಮ್ಮ ವರ್ತಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಮಾಡಿದ ಮಂದಾರರವರಿಗೆ ಸಂಘದ ವತಿಯಿಂದ ಇದು ಪ್ರೀತಿಯ ಸನ್ಮಾನವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಂದರ ರೈ ಮಂದಾರರು, ನಾನು ವರ್ತಕರ ಸಂಘದೊಂದಿಗೆ ಪೂರ್ಣ ಪ್ರಮಾಣದಲ್ಲಿ ಇಲ್ಲದಿದ್ದರೂ ಭಾವನಾತ್ಮಕವಾಗಿ ಸದಾ ಇದ್ದೇನೆ. ನನ್ನಿಂದ ಆಗುವ ಸಂಪೂರ್ಣ ಸಹಕಾರ ನೀಡುತ್ತೇನೆ, ತಾವು ಮಾಡಿದ ಸನ್ಮಾನ ನನಗೆ ಇನ್ನೊಂದು ರಾಜ್ಯೋತ್ಸವ ಪ್ರಶಸ್ತಿ ದೊರೆತಷ್ಟು ಖುಷಿ ಕೊಟ್ಟಿದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಜತೆ ಕಾರ್ಯದರ್ಶಿ ಚರಿತ್ ಕುಮಾರ್, ಮಾಜಿ ಅಧ್ಯಕ್ಷರುಗಳಾದ ಎಸ್.ಮಾಧವ ರೈ ಕುಂಬ್ರ, ದಿವಾಕರ ಶೆಟ್ಟಿ, ಮಾಜಿ ಉಪಾಧ್ಯಕ್ಷರುಗಳಾದ ರಮೇಶ್ ಆಳ್ವ ಕಲ್ಲಡ್ಕ, ರಾಜೇಶ್ ರೈ ಪರ್ಪುಂಜ ಹಾಗೇ ವರ್ತಕರ ಸಂಘದ ಪದಾಧಿಕಾರಿಗಳಾದ ಶುತಿಚಂದ್ರ, ಪದ್ಮನಾಭ ಆಚಾರ್ಯ, ಜಯರಾಮ ಆಚಾರ್ಯ, ಅಶ್ರಫ್ ಸನ್‌ಶೈನ್, ನಿಹಾಲ್ ಶೆಟ್ಟಿ ಚಾವಡಿ, ಹನೀಫ್, ಸುರೇಶ್ ಕುಮಾರ್ ತಿಂಗಳಾಡಿ, ಪ್ರಭಾಕರ ರೈ ಮುಂಡಾಳಗುತ್ತು, ಹನೀಫ್ ಸನ್‌ಶೈನ್, ಅಮೀನ್ ಕುಂಬ್ರ ಅಲ್ಲದೆ ಮಂದಾರರವರ ತಾಯಿ ಲಲಿತಾ ರೈ, ಪತ್ನಿ ಮಲ್ಲಿಕಾ ರೈ, ಪುತ್ರ ಆಯುಷ್ ಮಂದಾರ ಉಪಸ್ಥಿತರಿದ್ದರು.


ಉಡುಗೊರೆ ನೀಡಿ ಸನ್ಮಾನ
ಸನ್ಮಾನದ ವಿಶೇಷತೆಯಾಗಿ ಮಂದಾರರವರಿಗೆ ಫಲಪುಷ್ಪ,ಸ್ಮರಣಿಕೆಯೊಂದಿಗೆ ಉಡುಗೊರೆಯನ್ನು ನೀಡಲಾಯಿತು. ಹಾಟ್‌ಬಾಕ್ಸ್ ಮತ್ತು ಥರ್ಮಸ್ ಪ್ಲಾಸ್ಕ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here