ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಹಲವು ಪ್ರಶಸ್ತಿ ಲಭಿಸಿದೆ.
ಮೇಘ ಎಸ್.ಪಿ (10ನೇ) ಭಾವಗೀತೆ ಪ್ರಥಮ, ಪ್ರಜ್ಞಾ (9ನೇ) ತುಳು ಭಾಷಣ ಪ್ರಥಮ, ಶರಣ್ಯ ಶೆಟ್ಟಿ (8ನೇ)ಹಿಂದಿ ಭಾಷಣ ಪ್ರಥಮ, ರಾಶಿ ವೈ (9ನೇ) ಛದ್ಮವೇಷ ದ್ವಿತೀಯ, ಎಂ.ಮನಸ್ವಿನಿ ಆಚಾರ್ಯ(10ನೇ) ಜನಪದ ಗೀತೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಸಂಸ್ಥೆಯ ಕಾರ‍್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ವ್ಯವಸ್ಥಾಪಕ ರಮೇಶ್ ರೈ ಆರ್.ಬಿ, ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್, ತಾಂತ್ರಿಕ ಸಲಹೆಗಾರ ಜಯೇಂದ್ರ ಬಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಲೋಹಿತಾ ಎ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ತರಬೇತಿ ನೀಡಿದ್ದರು.