1986ರ ಬ್ಯಾಚ್ನ ಐಎಎಸ್ ಅಧಿಕಾರಿ
1988ರಲ್ಲಿ ಪುತ್ತೂರು ಎಸಿಯಾಗಿ ಪ್ರಥಮ ಸೇವೆ
ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಡಾ|ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
1986ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಹರ್ಯಾಣ ಮೂಲದ ರಜನೀಶ್ ಗೋಯೆಲ್ ಅವರು ಪ್ರಸ್ತುತ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ವಂದಿತಾ ಶರ್ಮಾ ಅವರು ನ.30ಕ್ಕೆ ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದ್ದು ಕರ್ನಾಟಕದ 40ನೇ ಮುಖ್ಯ ಕಾರ್ಯದರ್ಶಿಯಾಗಿ ಅವರು ದ.ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.2024ರ ಜುಲೈನಲ್ಲಿ ಇವರು ನಿವೃತ್ತಿ ಹೊಂದಲಿದ್ದಾರೆ.ಡಾ|ರಜನೀಶ್ ಗೋಯೆಲ್ ಇವರ ಪತ್ನಿ ಶಾಲಿನಿ ರಜನೀಶ್ ಕೂಡ ಐಎಎಸ್ ಅಧಿಕಾರಿಯಾಗಿದ್ದು ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಜನೀಶ್ ಗೋಯೆಲ್ ಅವರು ಆರಂಭದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿ ಜನಮನ್ನಣೆಗಳಿಸಿದ್ದರು.1986ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿರುವ ಇವರು ನೇಮಕಗೊಂಡು ಪ್ರೊಬೇಷನರಿ ಅವಧಿ ಬಳಿಕ 1988ರ ಆ.25ರಂದು ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿ ಪ್ರಥಮ ಕರ್ತವ್ಯಕ್ಕೆ ಹಾಜರಾಗಿದ್ದರು.ಆ ಬಳಿಕ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಡಾ|ರಜನೀಶ್ ಗೋಯೆಲ್ ಅವರು ಬಿಇ ಪದವೀಧರರಾಗಿದ್ದು, ಸಾರ್ವಜನಿಕ ಆಡಳಿತದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡವರು.
ಟೋಕನ್ ಪದ್ಧತಿ ಜಾರಿಗೆ ತಂದಿದ್ದರು:
ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ, ರಜನೀಶ್ ಗೋಯೆಲ್ ಅವರು ಪುತ್ತೂರಿನಲ್ಲಿ ಎಸಿಯಾಗಿದ್ದ ಸಂದರ್ಭದಲ್ಲಿ ಟೋಕನ್ ಪದ್ಧತಿ ಜಾರಿಗೆ ತಂದಿದ್ದರು.ನಾಗರಿಕರು ಅರ್ಜಿ ನೀಡುವಾಗಲೇ ಅವರಿಗೆ ಟೋಕನ್ ನೀಡಲಾಗುತ್ತಿತ್ತು ಮತ್ತು ಟೋಕನ್ನಲ್ಲಿ ನೀಡಲಾಗುತ್ತಿದ್ದ ದಿನದಂದೇ ಕಚೇರಿಗೆ ಬಂದು ತಮ್ಮ ಅರ್ಜಿಗೆ ಸಂಬಂಽಸಿದ ಉತ್ತರ ಪಡೆಯುತ್ತಿದ್ದರು.ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಽಕಾರಿಯಾಗಿಯೂ ಡಾ|ರಜನೀಶ್ ಗೋಯೆಲ್ ಸೇವೆ ಸಲ್ಲಿಸಿದ್ದರು.