ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳ ಇದರ 7 ನೇ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ನ.19 ರಂದು ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಉದ್ಘಾಟನೆಗೊಂಡಿತು. ಸಂಜೆ ಶ್ರೀ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಮೂರ್ತಿ ಪರಕ್ಕಜೆ ಗಣಪತಿ ಭಟ್‌ರವರು ದೀಪ ಪ್ರಜ್ವಲನೆಯ ಮೂಲಕ ತಿರುಗಾಟದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯರವರು ಮಾತನಾಡಿ, ತೆಂಕುತಿಟ್ಟು ಯಕ್ಷಗಾನ ಮೇಳಗಳಲ್ಲಿ ಹೆಸರು ಮಾಡಿದ ಮೇಳ ನಮ್ಮ ಹನುಮಗಿರಿ ಮೇಳ ಆಗಿದೆ. ಮೇಳದಲ್ಲಿ ಉತ್ತಮ ಕಲಾವಿದರು ಇದ್ದಾರೆ. ಯಕ್ಷಗಾನ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಹೇಳಿ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ,ಕಲಾವಿದರಿಗೆ ಪ್ರೋತ್ಸಾಹ ಕೊಡುವುದು ಎಂದರೆ ದೇವರಿಗೆ ಮಾಡುವ ಸೇವೆಯಂತೆ ಎಂದು ಹೇಳಿ ಶುಭ ಹಾರೈಸಿದರು. ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಿರುವವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಮೇಳದ ಪ್ರಬಂಧಕ ಹರೀಶ್ ಬಳಂತಿಮೊಗೇರು ಸ್ವಾಗತಿಸಿದರು. ಹಿರಣ್ಯ ವೆಂಕಟೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಮೇಳದ ತಿರುಗಾಟದ ಸಲುವಾಗಿ ಪ್ರಾರಂಭದಲ್ಲಿ ಶ್ರೀ ಕೋದಂಡರಾಮ ಸನ್ನಿಧಿ ಹಾಗೂ ಶ್ರೀ ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ಗೆಜ್ಜೆಪೂಜೆ ನೆರವೇರಿತು. ಯಕ್ಷಗಾನ ಕಲಾಪೋಷಕ ಶ್ಯಾಮ್‌ಭಟ್, ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಪಿ, ನಾಗರಾಜ್ ನಡುವಡ್ಕ ಸಹಿತಿ ಹಲವು ಮಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಸೇವೆಯಾಟವಾಗಿ ಅಶ್ವಮೇಧ ನಡೆಯಿತು. ನೂರಾರು ಕಲಾವಿದರು ಯಕ್ಷಗಾನ ವೀಕ್ಷಿಸಿ ಖುಷಿಪಟ್ಟರು.
ಈ ವರ್ಷದ ನೂತನ ಕಥಾ ಪ್ರಸಂಗ ‘ಇಂದ್ರಪ್ರಸ್ಥ’ ಸೇವೆಯ ಕಥಾ ಪ್ರಸಂಗವಾಗಿ ‘ಅಶ್ವಮೇಧ’ವನ್ನು ಆಡಿ ತೋರಿಸಲಿದ್ದಾರೆ. ಈ ವರ್ಷದ ನೂತನ ಕಥಾ ಪ್ರಸಂಗವಾಗಿ ‘ಇಂದ್ರಪ್ರಸ್ಥ’ವನ್ನು ಆಡಿ ತೋರಿಸಲಿದ್ದಾರೆ. ವಾಸುದೇವ ರಂಗಾ ಭಟ್ ಕಥಾ ಸಂಯೋಜನೆ ಹಾಗೂ ಪ್ರಸಾದ್ ಮೊಗೆಬೆಟ್ಟು ವಿರಚಿತ ಕಥಾ ಪ್ರಸಂಗ ಇದಾಗಿದೆ. ಮೇಳದ ಪ್ರದರ್ಶನಗಳು ಬೇಕಾದ್ದಲ್ಲಿ ಮೊ.9480574353ಗೆ ಸಂಪರ್ಕಿಬಹುದಾಗಿದೆ.