ಇಡ್ಯಡ್ಕ ಶೂರಪ್ಪ ಗೌಡರ ಸ್ಮರಣಾರ್ಥ ಕೀಲೆಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ

0

ಕಾಣಿಯೂರು: ಇತ್ತೀಚಿಗೆ ನಿಧನರಾದ ಇಡ್ಯಡ್ಕ ಕುಟುಂಬದ ಯಜಮಾನರಾದ ಇಡ್ಯಡ್ಕ ದಿ.ಶೂರಪ್ಪ ಗೌಡ ರವರ ಸ್ಮರಣಾರ್ಥ ಕೀಲೆ ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣವನ್ನು ಲೋಕಾರ್ಪಣೆಗೊಳಿಸಲಾಯಿತು. ಸುಮಾರು ರೂ 85,000 ವೆಚ್ಚದಲ್ಲಿ ಇಡ್ಯಡ್ಕ ಕುಟುಂಬಸ್ಥರ ಸಹಕಾರದಿಂದ ನಿರ್ಮಾಣಗೊಂಡ ಕುಟುಂಬದ ಹಿರಿಯರಾದ ಶೀನಪ್ಪ ಗೌಡರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪುತ್ತೂರು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ನಿವೃತ್ತ ಮುಖ್ಯಗುರು ಕೆ. ರಘುನಾಥ್ ರೈ ಶುಭ ಹಾರೈಸಿದರು, ಅರಣ್ಯಾಧಿಕಾರಿ ಯಶೋದರ ಕೆ, ಮನೋಹರ್, ದ. ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಶಿಕ್ಷಕ ಸಾಂತಪ್ಪ ಗೌಡ, ಕೀಲೆ ಸುಂದರ ಗೌಡ ಸಹೋದರರು, ಶೂರಪ್ಪ ಗೌಡರ ಪುತ್ರರಾದ ರಮೇಶ್ ಗೌಡ, ಕುಸುಮಾಧರ ಗೌಡ, ಪುತ್ರಿಯರಾದ ಕುಸುಮಾವತಿ, ಮೀನಾಕ್ಷಿ , ಹಾಗೂ ಇಡ್ಯಡ್ಕ ಸೇವಾ ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here