ಪುತ್ತೂರು: ಸಾಲ್ಮರ ಗುಂಪಕಲ್ಲಿನಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆಯೊಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ಸ್ಥಿತಿಯನ್ನು ಗಮನಿಸಿ ಆಕೆಯನ್ನು ಕಿಡ್ನಾಪ್ ಮಾಡಿ ಯಾರೋ ಬಿಟ್ಟು ಹೋಗಿದ್ದಾರೆಂಬ ಶಂಕೆಯಿಂದ ಪೊಲೀಸರು ಸರಕಾರಿ ಆಸ್ಪತ್ರೆಯಲ್ಲೇ ಬೀಡು ಬಿಟ್ಟ ಘಟನೆ ನ. 24 ರಂದು ರಾತ್ರಿ ನಡೆದಿದೆ.
ಸಾಲ್ಮರ ಗುಂಪಕಲ್ಲಿನಲ್ಲಿ ಅಸ್ವಸ್ಥಗೊಂಡು ಮಹಿಳೆಯೊಬ್ಬರು ತಡ ರಾತ್ರಿ ರಸ್ತೆ ಬದಿ ಬಿದ್ದಿದ್ದರು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಮಾತನಾಡುವ ಸ್ಥಿತಿಯಲ್ಲಿಲ್ಲದ ಹಿನ್ನಲೆಯಲ್ಲಿ ಆಕೆಯ ಸ್ಥಿತಿಗತಿಯನ್ನು ನೋಡಿ ಆಕೆಯನ್ನು ಯಾರೋ ಅಪಹರಣ ಮಾಡಿ ಬಿಟ್ಟಿರಬಹುದೆಂಬ ಶಂಕೆಯಿಂದ ರಾತ್ರೋ ರಾತ್ರಿ ಡಿವೈಎಸ್ಪಿ, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದರು. ರಾತ್ರಿಪೂರ್ತಿ ಪೊಲೀಸರು ಆಸ್ಪತ್ರೆಯ ಹೊರ ಆವರಣದಲ್ಲಿದ್ದರು. ನಸುಕಿನ ಜಾವ ಮಹಿಳೆಗೆ ಪ್ರಜ್ಞೆ ಬಂದಾಗ ಆಕೆ ತಾನು ಚೆನ್ನರಾಯಪಟ್ಟಣದವಳೆಂದು ತಿಳಿಸಿರುವುದಾಗಿ ಮಾಹತಿ ಲಭ್ಯವಾಗಿದೆ.