ಹೆಸರಾಂತ ಕೃಷಿ ಯಂತ್ರೋಪಕರಣ ಮಾರಾಟ ,ಸೇವಾ ಮಳಿಗೆ ವಾಟರ್ ವಿಂಗ್ ಟೆಕ್ನೋಲಾಜೀಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು : ನೆಹರುನಗರ ಮಂಗಳ ಸ್ಟೋರ್ಸ್ ಇದರ ಮಹಡಿಯಲ್ಲಿ ವ್ಯವಹಾರಿಸುತ್ತಿದ್ದ ವಿಟ್ಲ ಅಲಂಗಾರು ಬಾಲಕೃಷ್ಣ ಭಟ್ ಇವರ ಮಾಲೀಕತ್ವದ ಹೆಸರಾಂತ ಕಂಪನಿಗಳ ಕೃಷಿ , ತೋಟಗಾರಿಕೆ , ನೀರಾವರಿ ಉಪಕರಣಗನ್ನೊಳಗೊಂಡ ವಾಟರ್ ವಿಂಗ್ ಟೆಕ್ನೋಲಾಜಿಸ್ ಮಳಿಗೆ ಸ್ಥಳಾಂತರಗೊಂಡು ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗದ ಕೇಶವ ಶ್ರೀ ಶಾಪಿಂಗ್ ಸೆಂಟರ್ ಸಂಕೀರ್ಣದಲ್ಲಿ ನ.25 ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿತು.


ಪುರೋಹಿತ ಮಂಚಿ ನಂದನ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿ ,ನೂತನ ಸಂಸ್ಥೆ ಇದರ ಶ್ರೆಯೋಭಿವೃದ್ಧಿಗೆ ಹರಸಿ ,ಹಾರೈಸಿದರು.ಮಾಲೀಕರ ಸಹೋದರ ಬಾಲಸುಬ್ರಹ್ಮಣ್ಯ ಭಟ್ , ದಿನೇಶ್ ವೈದ್ಯ , ಉರಿಮಜಲು ಗೋವಿಂದ ಭಟ್ , ಸಂಕೀರ್ಣದ ಪಾಲುದಾರರಾದ ಅಜಿತ್ ನಾಯಕ್ ಮತ್ತು ಪ್ರಕಾಶ್ ನಾಯಕ್ ಸಹಿತ ಹಲವರು ಅತಿಥಿಗಳು ಹಾಜರಿದ್ದರು.
ಸಂಸ್ಥೆ ಸಿಬಂದಿಗಳಾದ ಪ್ರಸನ್ನ ಭಟ್ ,ಪದ್ಮನಾಭ ಪೂಜಾರಿ ,ರಕ್ಷಿತಾ ಶೆಟ್ಟಿ ಮತ್ತು ಧನುಷ್ ಸಹಕಾರ ನೀಡಿದರು. ಮಾಲೀಕ ದಂಪತಿ ಶೈಲಜಾ ಬಾಲಕೃಷ್ಣ ಭಟ್ ಸ್ವಾಗತಿಸಿ , ಸತ್ಕರಿಸಿ ,ವಂದಿಸಿ ಬಳಿಕ ಮಾತನಾಡಿ , ಶುಭಾರಂಭ ಪ್ರಯುಕ್ತ ಇಂದಿನಿಂದ ಡಿ.2 ರ ತನಕ ನಮ್ಮೆಲ್ಲ ಗ್ರಾಹಕರಿಗೆ ಎಲ್ಲಾ ರೀತಿಯ ಖರೀದಿಯಲ್ಲೂ ವಿಶೇಷವಾದ ರಿಯಾಯಿತಿ ಸಿಗಲಿದೆ. ಇಷ್ಷೇಯಲ್ಲದೇ ರೆಡ್ ಬೀ ಕಂಪನಿ ಇದರ ಎಂ ಯು ಟಿ ವಿ 500 ಡಂಪರ್ ಖರೀದಿಗೆ ವಿಶೇಷ ಕೊಡುಗೆಯಾಗಿ ಸ್ತಿಲ್ ಕಂಪನಿಯ ಆರ್ ಇ 80 ಎಕ್ಸ್ ಹೈ ಪ್ರೆಶರ್ ಕಾರ್ ಕ್ಲೀನರ್ ಸಂಪೂರ್ಣ ಉಚಿತವಾಗಿಯೂ ಸಿಗಲಿದೆಯೆಂದು ಹೇಳಿ ಎಲ್ಲರ ಸಹಕಾರ ಯಾಚಿಸಿದರು.

ಸಂಸ್ಥೆಯ ಬಗ್ಗೆ :
ಮಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಸಂಸ್ಥೆಗೆ ಪುತ್ತೂರು ಒಳಗೊಂಡೂ ಎಂಟು ಶಾಖೆಗಳನ್ನು ಈಗಾಗಲೇ ಹೊಂದಿದ್ದು , ನ.26( ನಾಳೆ) ರಂದು ಒಂಭತ್ತನೆಯ ಶಾಖೆ ಸುಳ್ಯದಲ್ಲೂ ಪ್ರಾರಂಭಗೊಳ್ಳಲಿದೆ. ಶಿರಸಿಯಲ್ಲಿ ಪ್ರಾದೇಶಿಕ ಕಛೇರಿ ಹೊಂದಿರುವ ಸಂಸ್ಥೆಯ ಅಡಿಯಲ್ಲಿ ಕುಮಟಾ ,ಯಲ್ಲಾಪುರ ,ದಾಂಡೇಲಿ ಹಾಗೂ ಕುಂದಾಪುರದಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.ಪುತ್ತೂರಿನಲ್ಲೂ ಪ್ರಾದೇಶಿಕ ಕಛೇರಿ ಹೊಂದಿ ,ಬೆಳ್ತಂಗಡಿ ಶಾಖೆ ಕಾರ್ಯನಿರ್ವಹಿಸುತ್ತಿದ್ದು ಇದೀಗ ಸುಳ್ಯ ಶಾಖೆ ಕೂಡ ಸೇರ್ಪಡೆಯಾಗಲಿದೆ.ಇಷ್ಟೇಯಲ್ಲದೇ ಕಳಸದಲ್ಲಿ ಗ್ರೀನ್ ಇರಿಗೇಶನ್ ಡಿಸೈನರ್ಸ್ ಸಂಸ್ಥೆಯೂ ಕೂಡ ಕಾರ್ಯನಿರ್ವಹಿಸುತ್ತಿದೆ.

ಮಳಿಗೆಯಲ್ಲಿ ಲಭ್ಯವಿರುವ ಪ್ರಮುಖ ಕಂಪನಿ :
ಸ್ತಿಲ್ ,ವೂಲ್ಪ್ ಗಾರ್ಟನ್ , ಫರ್ಮ್ ,ನೆಟಾಫಿಂ ,ರೆಡ್ ಬೀ ,ಕಾರ್ಚೆರ್ ,ಕಬ್ಕಾಡೆಟ್ ,ಸ್ಟ್ಯಾನ್ ಲೆ ಹಾಗೂ ಡಿವಾಲ್ಟ್ ಕಂಪೆನಿಯ ಕೃಷಿ ಹಾಗೂ ಕೈಗಾರಿಕೆ ಸಂಬಂಧಿತ ಉಪಕರಣಗಳು ಇಲ್ಲಿ ಅತ್ಯುತ್ತಮ ದರಗಳಲ್ಲಿ ಲಭ್ಯವಿದ್ದು , ಮಾರಾಟ ಹಾಗೂ ಆನಂತರದ ಸೇವೆಯೂ ಲಭ್ಯವಿದ್ದು , ಗ್ರಾಹಕರು ಎಂದಿನಂತೆ ಸಹಕಾರವನ್ನಿತ್ತು ಬೆಂಬಲ ಕೊಡುವಂತೆ ಮಾಲೀಕ ರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here