ಕೆಯ್ಯೂರಿನಲ್ಲಿ ಪುತ್ತಿಲ ಪರಿವಾರದಿಂದ ರಾಮತಾರಕ ಹವನ ಮತ್ತು ಸಾರ್ವಜನಿಕ ಶ್ರೀ ದುರ್ಗಾಪೂಜೆ

0

ಹಿಂದೂ ಸಮಾಜದ ಶಕ್ತಿಯೇ ಕಾರ್ಯಕರ್ತರು: ಅರುಣ್ ಕುಮಾರ್ ಪುತ್ತಿಲ

 ಕೆಯ್ಯೂರು: ಪುತ್ತಿಲ ಪರಿವಾರ ಧಾರ್ಮಿಕ ಸೇವಾ ಘಟಕ ಕೆಯ್ಯೂರು ವತಿಯಿಂದ ಲೋಕಕಲ್ಯಾಣಾರ್ಥವಾಗಿ ರಾಮತಾರಕ ಹವನ ಮತ್ತು ಸಾರ್ವಜನಿಕ ಶ್ರೀ ದುರ್ಗಾಪೂಜೆ ,  ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ  ನ25ರಂದು ನಡೆಯಿತು.

ಅರ್ಚಕ ಕಿಶೋರ್ ಭಟ್ ಅರ್ತ್ಯಡ್ಕ ನೇತೃತ್ವದಲ್ಲಿ ರಾಮತಾರಕ ಹವನ ಮತ್ತು ಸಂಜೆ ಸಾರ್ವಜನಿಕ ಶ್ರೀ ದುರ್ಗಾಪೂಜೆ ಕುಂಕುಮಾರ್ಚನೆ ನಡೆಸಿಕೊಟ್ಟರು. ಕೆಯ್ಯೂರು ಮಹಾದ್ವಾರದಿಂದ ಮಕ್ಕಳ ಭಜನಾ ಕುಣಿತದಿಂದ ಶ್ರೀ ಕ್ಷೇತ್ರ ದೇವಳದ ತನಕ ಕುಣಿತ ಭಜನೆ ನಡೆಯಿತು. ಕೆಯ್ಯೂರು ಜಯಕರ್ನಾಟಕ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ   ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಉಧ್ಘಾಟಕರಾಗಿ, ಮಾತನಾಡಿ ಸಮಾಜದ ಸಂಸ್ಕೃತಿ, ವಿಚಾರಧಾರೆಗಳು ನಮ್ಮ ಮುಂದಿನ ಪಿಳಿಗೆಗೆ ತಿಳಿಯಲು, ಭಜನೆಯಂತಹ ಕಾರ್ಯಕ್ರಮಕ್ಕೆ ಒತ್ತು ಕೋಡಬೇಕು, ಅಗ ಮಾತ್ರ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಸರ್ವತೋಮುಖ ಬೆಳವಣಿಗೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದೂ ಸಮಾಜಕ್ಕೆ ಕಾರ್ಯಕರ್ತರೇ ಶಕ್ತಿ ಎಂದರು.

ಅದ್ಯಕ್ಷತೆಯನ್ನು ಪ್ರಸನ್ನ ಮಾರ್ತ ವಹಿಸಿ ಮಾತನಾಡಿ ಯುವಕರ ಶಕ್ತಿ ಎನೆಂಬುದನ್ನ ಕೆಯ್ಯೂರಿನ ಯುವಕರು ತೋರಿಸಿಕೊಟ್ಟಿದ್ದಾರೆ. ಇವತ್ತಿನ ದಿನಗಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಯಬೇಕಾದರೆ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಬೇಕು ಎಂದು ಹೇಳಿದರು, ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಶಶಿದರ ರಾವ್ ಬೊಳಿಕಲ ಮಾತನಾಡಿ ಹಿಂದು ಪರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಪುತ್ತೂರು ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ಇತಂಹ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಐಕ್ಯತೆ ಕಾಪಡಬೇಕು ಎಂದು ಹೇಳಿದರು.  ಪುತ್ತೂರು ಖ್ಯಾತ ವೈದ್ಯ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಮಾತನಾಡಿ ಭಜನೆಯಿಂದ ವಿಭಜನೆಯನ್ನು ತಪ್ಪಿಸಬಹುದು ಎಂದರು. ಕುಕ್ಕೇಶ್ರೀ ಸುಬ್ರಮಣ್ಯ ದೇವಸ್ಥಾನ ಪುರೋಹಿತ ಸರ್ವೇಶ್ವರ ಭಟ್, ಕೆಯ್ಯೂರು ಗ್ರಾ.ಪಂ.ಉಪಾದ್ಯಕ್ಷೆ ಸುಮಿತ್ರಾ ದಿವಾಕರ ಪಲ್ಲತ್ತಡ್ಕ,  ಕೆಯ್ಯೂರು ದಾರ್ಮಿಕ ಸೇವಾ ಘಟಕ ಗೌರವದ್ಯಕ್ಷ ಸುಭ್ರಾಯ ಭಟ್ ಪಲ್ಲತ್ತಡ್ಕ, ಕಾರ್ಯದ್ಯಕ್ಷ ರಘರಾಮ ಪಲ್ಲತ್ತಡ್ಕ, ಅದ್ಯಕ್ಷ ದಿವಾಕರ ಪೂಜಾರಿ ಪಲ್ಲತ್ತಡ್ಕ, ಪ್ರದಾನ ಕಾರ್ಯದರ್ಶಿ ಪ್ರವೀಣ್ ಕಟ್ಟತ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. 

ಕೆಯ್ಯೂರು ಮಹಾದ್ವಾರದಿಂದ ದೇವಲಾಯದ ತನಕ  ಶ್ರೀ ರಾಮ ಕುಣಿತ ಭಜನಾ ತಂಡ ಕೆಯ್ಯೂರು, ಶ್ರೀ ಅಯ್ಯಪ್ಪ ಭಜನಾ ಮಂಡಳಿ ದರ್ಬೆತಡ್ಕ ಶ್ರೀ ವನಶಾಸ್ತರ ಚಿಣ್ಣರ ಕುಣಿತ ಭಜನಾ ತಂಡ ಆಲಂತ್ತಡ್ಕ, ಶ್ರೀ ಧರ್ಮರಸು ಕುಣಿತ ಭಜನಾ ತಂಡ ಪಾಲ್ತಾಡಿ , ಶ್ರೀ ಷಣ್ಮುಖ ಭಜನಾ ಮಂಡಳಿ ಕೊಲ್ಪೆ, ಭಜನಾ ತಂಡವು ಭಜನೆಯಲ್ಲಿ ಪಾಲ್ಗೊಂಡವು.

ಸುಮಾರು 800ಮಂದಿ ಭಕ್ತರು ಸಾರ್ವಜನಿಕ ಶ್ರೀ ದುರ್ಗಾಪೂಜೆ ,ಕುಂಕುಮಾರ್ಚನೆ ಪೂಜೆಯಲ್ಲಿ ಪಾಲ್ಗೊಂಡರು, ಮಹಾಪೂಜೆ ನಡೆದು ಪ್ರಸಾದ ವಿತರಣೆ , ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.  ಪುತ್ತಿಲ ಪರಿವಾರ ಪಧಾದಿಕಾರಿಗಳು,ಕೆಯ್ಯೂರು ಧಾರ್ಮಿಕ ಸೇವಾ ಘಟಕ ಸದಸ್ಯರುಗಳು, ಸ್ವಯಂ ಸೇವಾ ಸಮಿತಿ ಸಂಚಾಲಕರು, ಭಕ್ತಾಧಿಗಳು ಉಪಸ್ಥಿತರಿದ್ದರು. ಅರ್ಚನಾ ಪಿ.ರೈ ಸ್ವಾಗತಿಸಿ, ಪ್ರವೀಣ್ ಚೆನ್ನಾವರ ವಂದಿಸಿ, ಪ್ರಜ್ವಲ್ ಚೆನ್ನವಾರ ಕಾರ್ಯಕ್ರಮ ನಿರೂಪಿಸಿದರು. 

ಸನ್ಮಾನ ಕಾರ್ಯಕ್ರಮ
ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪುರೋಹಿತರಾದ ಸರ್ವೇಶ್ವರ ಭಟ್ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರಿಗೆ  ಸುಬ್ರಮಣ್ಯ ದೇವರ ಪೋಟೋ,ಫಲಪುಷ್ಪ ,ಶಾಲು ಹಾಕಿ ಸನ್ಮಾನಿಸಿದರು. 

LEAVE A REPLY

Please enter your comment!
Please enter your name here