ಉಪ್ಪಿನಂಗಡಿ: ಬಿಜೆಪಿ ಬೆಂಬಲಿತರ ಆಡಳಿತವಿರುವ ಇಳಂತಿಲ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರೇ ಸಭೆಗೆ ಗೈರು ಹಾಜರಾದ ಘಟನೆ ನ.ರಂದು ನಡೆದಿದ್ದು, ಇದರಿಂದಾಗಿ ಸಭೆಯಲ್ಲಿ ಕೋರಂ ಕೊರತೆ ಎದುರಾಗಿ ಸಭೆ ರದ್ದುಗೊಳ್ಳುವಂತಾಗಿದೆ.
ಇಳಂತಿಲ ಗ್ರಾ.ಪಂ.ನಲ್ಲಿ ಒಟ್ಟು ಸದಸ್ಯ ಬಲವಿದ್ದು, ಅವರಲ್ಲಿ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದರೆ, ಓರ್ವ ಸದಸ್ಯ ಕಾಂಗ್ರೆಸ್ ಬೆಂಬಲಿತರು ಹಾಗೂ ಇನ್ನೋರ್ವರು ಎಸ್‌ಡಿಪಿಐ ಬೆಂಬಲಿತರಾಗಿ ಗ್ರಾ.ಪಂ.ಗೆ ಆಯ್ಕೆಯಾದವರು. ಪೂರ್ವನಿಗದಿಯಂತೆ ಗ್ರಾ.ಪಂ.ನ ಸಭಾಂಗಣದಲ್ಲಿ ಸಾಮಾನ್ಯ ಸಭೆ ಕರೆಯಲಾಗಿದ್ದು, ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ ಸಭೆಯನ್ನು ಆರಂಭಿಸಲು ಕೋರಂ ಕೊರತೆ ಕಂಡು ಬಂತು. ಸುಮಾರು ಒಂದು ಗಂಟೆಯಷ್ಟು ಕಾಲ ಸದಸ್ಯರ ಬರುವಿಕೆಗಾಗಿ ಕಾದರೂ ಕೋರಂ ಭರ್ತಿಯಾಗಿರಲಿಲ್ಲ. ಬಳಿಕ ಸಭೆಯನ್ನು ರದ್ದುಗೊಳಿಸಿ, ಡಿ.೫ಕ್ಕೆ ಮುಂದೂಡಲಾಯಿತು. ಈ ಸಭೆಗೆ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರಾದ ವಸಂತ ಶೆಟ್ಟಿ, ಚಂದ್ರಿಕಾ ಭಟ್, ವಿಜಯಕುಮಾರ್, ಉಷಾ, ರೇಖಾ, ಸಿದ್ದೀಕ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಯು.ಕೆ. ಇಸುಬು, ಎಸ್‌ಡಿಪಿಐ ಬೆಂಬಲಿತ ಸದಸ್ಯೆ ನುಸ್ರತ್ ಗೈರುಹಾಜರಿಯಾಗಿದ್ದರು. ಸಭೆಗೆ ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ರಮೇಶ, ಉಷಾ, ಜಾನಕಿ, ಸುಪ್ರೀತ್ ಬಂದಿದ್ದರು. ಆದರೆ ಇಲ್ಲಿ ಕೋರಂ ಕೊರತೆ ಉಂಟಾಗಿದ್ದರಿಂದ ಸಭೆ ರದ್ದುಗೊಂಡಿತು.
ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ ಮಾತನಾಡಿ, ಗ್ರಾಮದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಗ್ರಾಮಸ್ಥರ ಕಡತಗಳ ವಿಲೇವಾರಿಗೆ ಅಡ್ಡಿಯಾಗದಂತೆ ಸರ್ವ ಸದಸ್ಯರು ಸಭೆಗೆ ಬಂದು ಸಹಕರಿಸಬೇಕು. ಅಲ್ಲದೇ, ಇನ್ನು ಮುಂದೆ ಎಲ್ಲಾ ಸದಸ್ಯರು ಸಭೆಯ ನಿಗದಿತ ವೇಳೆಗಿಂತ ನಿಮಿಷ ಮೊದಲೇ ಬಂದು ತಮ್ಮ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಯನ್ನು ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಸದಸ್ಯ ಈಸುಬು ಯು.ಕೆ., ಗ್ರಾ.ಪಂ. ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಸಭೆಗೆ ಗೈರು ಹಾಜರಾಗಿದ್ದೇನೆ ಎಂದು ತಿಳಿಸಿದರು.