ಪುತ್ತೂರು: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆ ಇದರ ಕನ್ನಡ ಸಾಂಸ್ಕೃತಿಕ ಸಂಘವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಕಟಿಸುತ್ತಿರುವ ಕಣಾದ ವಾರ್ಷಿಕ ವಿಜ್ಞಾನ
ಪತ್ರಿಕೆಯ 49ನೆಯ ಸಂಚಿಕೆಗಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಒಟ್ಟು 13 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ಬಹುಮಾನ ವಿಜೇತರಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು,(ಓಂಐ) ಬೆಂಗಳೂರು ಇದರ ಕನ್ನಡ ವಿಜ್ಞಾನ ಪತ್ರಿಕೆ ಕಣಾದ ಮುಖ್ಯ ಸಂಪಾದಕರಾದ ಡಾ|| ಸಂಧ್ಯಾ ರಾವ್ ಇವರು ನಡೆಸಿಕೊಟ್ಟರು.
ಅನಿಲ ಸಂವೇದಕಗಳು ಈ ವಿಷಯದಲ್ಲಿ 9ನೇ ತರಗತಿಯ ನಿಶಾ ಕೆ (ವಿನಂತ ಗೌಡ ಮತ್ತು ನಿರ್ಮಲಾ ರವರ ಪುತ್ರಿ) ಪ್ರಥಮ ಬಹುಮಾನ ಹಾಗೂ 10ನೇ ತರಗತಿಯ ಶ್ರೀವತ್ಸ ಬಿ (ಮಂಜುನಾಥಾಯ್ಯ ಬಿ ಮತ್ತು ಮೀನಾಕ್ಷಿ ಬಿ ರವರ ಪುತ್ರ) ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಕಾಂಕ್ರೀಟ್ ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳು ಈ ವಿಷಯದಲ್ಲಿ ಪ್ರಬಂಧ ಬರೆದು 10ನೇ ತರಗತಿಯ ಧನ್ಯಾ ಬಿ (ಮಾಧವ ಗೌಡ ಮತ್ತು ಗೀತಾ ಬಿ ರವರ ಪುತ್ರಿ) ದ್ವಿತೀಯ ಬಹುಮಾನ ಮತ್ತು 10ನೇ ತರಗತಿಯ ಮೌಲ್ಯ ಕೆ (ಶ್ರೀಪತಿ ಮತ್ತು ನಳಿನಿ ಯವರ ಪುತ್ರಿ ) ಸಮಾಧಾನಕರ ಬಹುಮಾನ ಪಡೆದಿರುತ್ತಾರೆ. ಜಾಗತಿಕ ತಾಪಮಾನದ ದುಷ್ಪರಿಣಾಮಗಳು ಹಾಗೂ ಸೂಕ್ತ ಪರಿಹಾರಗಳು ಈ ವಿಷಯದಲ್ಲಿ 10ನೇ ತರಗತಿಯ ಕಾರ್ತಿಕೇಯ ವಾಗ್ಲೆ ಬಿ (ಶಿವಪ್ರಕಾಶ್ ವಾಗ್ಲೆ ಬಿ ಮತ್ತು ಸುಲೋಚನಾ ಎಸ್ ರವರ ಪುತ್ರ) ಮತ್ತು 9ನೇ ತರಗತಿಯ ನೇತ್ರಾ ಎಂ. ಪಿ(ಎಂ ಪ್ರಸನ್ನ ಕುಮಾರ್ ಮತ್ತು ಚಿತ್ರಾ ಎಸ್ ನಾಯ್ಕ್ ರವರ ಪುತ್ರಿ) ದ್ವಿತೀಯ ಬಹುಮಾನ ಮತ್ತು 10ನೇ ತರಗತಿಯ ಸ್ವಸ್ತಿ (ಎಂ ಶಿವಪ್ರಸಾದ್ ಭಟ್ ಮತ್ತು ಸುಜಾತ ರವರ ಪುತ್ರಿ) ಮತ್ತು 8ನೇ ತರಗತಿಯ ಲಿತೇಶ್ ಕೆ (ಶ್ರೀಪತಿ ಮತ್ತು ನಳಿನಿ ಯವರ ಪುತ್ರ) ದ್ವಿತೀಯ ಬಹುಮಾನ ಹಾಗೂ 10 ನೇ ತರಗತಿಯ ಪೂಜಾ ಎಂ ಎಸ್ (ಸುರೇಶ್ ಪಿ ಮತ್ತು ಸುಮಿತ್ರಾ ರವರ ಪುತ್ರಿ) ಮತ್ತು 10 ನೇ ತರಗತಿಯ ವಿಜೇತಾ ಜೆ ರೈ (ಜಯಕರ ರೈ ಮತ್ತು ಗೀತಾ ಜೆ ರೈ ಯವರ ಪುತ್ರಿ) ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.
ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವುದರೊಂದಿಗೆ ಈ ಪ್ರಬಂಧಗಳು ಕಣಾದ ವಾರ್ಷಿಕ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.