ವಿವೇಕಾನಂದ ಕಾಲೇಜಿನಲ್ಲಿ ರಕ್ತದಾನ ಶಿಬಿರ

0

ಭಯವನ್ನು ಹೋಗಲಾಡಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿರಲಿ : ಡಾ ರಾಮಚಂದ್ರ ಭಟ್.

ಪುತ್ತೂರು: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು. ರಕ್ತದಾನ ಮಹಾದಾನ, ಒಂದು ಹನಿರಕ್ತ ಅಮೂಲ್ಯ ಜೀವದ ಉಳಿಯುವಿಕೆಗೆ ನೆರವಾಗಲಿದೆ. ರಕ್ತದಾನ ಮಾಡಬೇಕಾದರೆ ಗಂಡು ಹೆಣ್ಣು ಭೇದವಿಲ್ಲದೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತದ ಸಂಚಲನವಾಗುತ್ತದೆ . ಅದರೊಂದಿಗೆ ಉತ್ತಮ ಆರೋಗ್ಯವಂತರಾಗಿದ್ದು ಧೈರ್ಯವಂತರಾಗಿರಬೇಕೆಂದು ಪುತ್ತೂರಿನ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ ರಾಮಚಂದ್ರ ಭಟ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವಾಯತ್ತ ಪುತ್ತೂರು ಮಹಾವಿದ್ಯಾಲಯ ಎನ್ ಎಸ್ ಎಸ್ ,ಎನ್ ಸಿ ಸಿ , ರೋವರ್ ಮತ್ತು ರೇಂಜರ್ಸ್ , ಯುವ ರೆಡ್ ಕ್ರಾಸ್, ವಿದ್ಯಾರ್ಥಿ ಸಮಿತಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಇಲಾಟಿ ಇದರೊಂದಿಗೆ ರೋಟರಿ ಕ್ಯಾಂಪ್ಕೋ ರಕ್ತ ಕೇಂದ್ರ ಪುತ್ತೂರು, ವೆನ್ಲಾಕ್ ಆಸ್ಪತ್ರೆ ರಕ್ತ ಕೇಂದ್ರ ಮಂಗಳೂರು ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಇದರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.


ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಬೇಕು.ಆದ್ದರಿಂದ ಇಂತಹ ಶಿಬಿರವನ್ನು ಕಾಲೇಜಿನಲ್ಲಿ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು.ಉತ್ತಮ ರೀತಿಯ ಆಹಾರವನ್ನು ಸೇವಿಸಿಕೊಂಡು ತಮ್ಮ ದೇಹದ ಹಿಮೋಗ್ಲೋಬಿನ್ ಅಂಶವ ಹೆಚ್ಚಿಸಿಕೊಂಡು ರಕ್ತದಾನ ಮಾಡುವ ಅಂಶವ ಬೆಳೆಸಿಕೊಳ್ಳುವುದು ಉತ್ತಮ ಎಂದು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ತಿಳಿಸಿದರು.


ವೇದಿಕೆಯಲ್ಲಿ ಗ್ರೇಸಿ ಗೊನ್ಸಾಲಿನ್ಸ್ ಅಧ್ಯಕ್ಷ ಪುತ್ತೂರು ರೋಟರಿ ಕ್ಲಬ್ ಪುತ್ತೂರು, ಹಾಜಿ ಅಬ್ದುಲ್ ರಜಾಕ್ ಅಧ್ಯಕ್ಷ ಮತ್ತು ಪುತ್ತೂರು ಇಲೈಟಿ ,ಅನೀಶ್ ಕುಮಾರ್ ಶೆಟ್ಟಿ ಮುಖ್ಯಸ್ಥ ಮುಖ್ಯಸ್ಥ ಹೆಚ್ ಡಿ ಎಫ್ ಸಿ ಬ್ಯಾಂಕ್ ಪುತ್ತೂರು, ಭಾಗ್ಯಶ್ರೀ ಸಹಾಯಕ ಮುಖ್ಯಸ್ಥೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿಂದಿ ವಿಭಾಗದ ಮುಖ್ಯಸ್ಥೆ ಮತ್ತು ಯುವ ರೆಡ್ ಕ್ರಾಸ್ ನ ಅಧಿಕಾರಿ ಡಾ ದುರ್ಗಾರತ್ನ ಸಿ ಸ್ವಾಗತಿಸಿ, ವಂದಿಸಿ , ನಿರ್ವಹಿಸಿದರು.

LEAVE A REPLY

Please enter your comment!
Please enter your name here