ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನೇತೃತ್ವದಲ್ಲಿ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟ ಡಿ.1ರಿಂದ 4ರ ತನಕ ಜರುಗಲಿದೆ. ಡಿ. 2 ರಿಂದ 4ರ ತನಕ ಮೈದಾನದಲ್ಲಿ ಕ್ರೀಡಾಪಟುಗಳಿಗೆ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಹಿತ ಸಾವಿರಾರು ಮಂದಿಗೆ ನೂರಾರು ಬಗೆಯ ಉಟೋಪಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಆಯಾ ಜಿಲ್ಲೆಯ ಜನರಿಗೆ ಅವರ ಆರೋಗ್ಯದ ಹಿನ್ನಲೆಯಲ್ಲಿ ಅವರಿಗೆ ಸರಿ ಹೊಂದುವ ಆಹಾರವನ್ನೇ ಸಿದ್ಧಪಡಿಸಲಾಗುತ್ತಿದೆ.
ಡಿ.1 ರಂದು ಬೆಳಿಗ್ಗೆ 7.30 ರಿಂದ 10 ಗಂಟೆಯ ತನಕ 500 ಜನರಿಗೆ ದೋಸೆ ಗಸಿ, ಟೊಮೇಟೋ ಬಾತ್, ಪುಳಿಯೊಗರೆ, ಕಾಫಿ, ಚಾ, ಕಷಾಯ, ಮಧ್ಯಾಹ್ನ ಗಂಟೆ 12.30 ರಿಂದ 2.30ರ ತನಕ 1,500 ಮಂದಿಗೆ ಊಟ, ಮುದ್ದೆ ಸಾರು, ಉಪ್ಪಿನಕಾಯಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ, ಬಿಸಿ ಬೇಳೆ ಬಾತ್, ಪಾಯಸ, ಸಂಜೆ ಗಂಟೆ 5 ರ ನಂತರ 2ಸಾವಿರ ಮಂದಿಗೆ ಲಘು ಉಪಹಾರ, ಕ್ರೀಡಾ ನಿರ್ಣಾಯಕ 500 ಮಂದಿಗೆ ಕಾಯಿ ಪೋಡಿ, ಹಣ್ಣು ಪೋಡಿ, ಕಾಫಿ/ಚಹಾ/ ಕಷಾಯ, ರಾತ್ರಿ ಗಂಟೆ 7.30 ರಿಂದ 10 ಗಂಟೆಯ ತನಕ 2500 ಮಂದಿಗೆ ಊಟ, ಉಪ್ಪಿನಕಾಯಿ, ಚಪಾತಿ ಕೂಟು, ಜೋಳ ರೊಟ್ಟಿ ಚಟ್ನಿ, ಅನ್ನಸಾಂಬಾರು, ಚಟ್ನಿ, ಬಾಳೆಹಣ್ಣು ಪಾಯಸ ಇರಲಿದೆ.
ಡಿ.3 ರಂದು ಬೆಳಿಗ್ಗೆ ಗಂಟೆ 6ಕ್ಕೆ 200 ಕ್ರೀಡಾ ನಿರ್ಣಾಯಕರಿಗೆ ಕಾಫಿ, ಚಹಾ, ಬಿಸ್ಕತ್, ಬೆಳಿಗ್ಗೆ ಗಂಟೆ 7.30 ರಿಂದ 10 ಗಂಟೆಯ ತನಕ 3ಸಾವಿರ ಮಂದಿಗೆ ಚೌಚೌ ಬಾತ್, ಕಡ್ಲೆ ಅವಲಕ್ಕಿ ಪಲಾವ್, ಕಾಫಿ/ಚಹಾ/ಬಾದಾಮ್ ಮತ್ತು 2,500 ಮೊಟ್ಟೆ, ಬೆಳಿಗ್ಗೆ ಗಂಟೆ 11ಕ್ಕೆ 500 ಕ್ರೀಡಾ ನಿರ್ಣಾಯಕರಿಗೆ ಲಿಂಬೆ ಪುದೀನ ಮಿಂಟ್ ಜ್ಯೂಸ್, ಮಧ್ಯಾಹ್ನ ಗಂಟೆ 12.30 ರಿಂದ 2.30ರ ತನಕ 6ಸಾವಿರ ಮಂದಿಗೆ ಊಟ, ಮುದ್ದೆ ಸಾರು, ವೆಜ್ ಬಿರಿಯಾನಿ, ಅನ್ನತೋವೆ, ಸಂಡಿಗೆ, ಮೆಣಸ್ಕಾಯಿ, ಪಾಯಸ, ಮಜ್ಜಿಗೆ, ಸಾರ್ವಜನಿಕರಿಗೆ ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಸಂಜೆ ಗಂಟೆ 5 ಕ್ಕೆ ಸೇಮಿಗೆ ಉಸ್ಲಿ, ರಾತ್ರಿ ಗಂಟೆ 7.30 ರಿಂದ 10 ಗಂಟೆಯ ತನಕ 3ಸಾವಿರ ಮಂದಿಗೆ ಊಟ, ಉಪ್ಪಿನಕಾಯಿ, ಜೋಳದ ರೊಟ್ಟಿ, ಚಟ್ನಿ, ಚಪಾತಿ ಪಲ್ಯ, ಮೊಸರನ್ನ, ಅನ್ನ ರಸಂ, ಪಾಯ, ಬಾಳೆಹಣ್ಣು, ಕಬಾಬ್ ಇರಲಿದೆ.
ಡಿ.4 ರಂದು ಬೆಳಿಗ್ಗೆ ಗಂಟೆ 6ಕ್ಕೆ 200 ಕ್ರೀಡಾ ನಿರ್ಣಾಯಕರಿಗೆ ಕಾಫಿ, ಚಹಾ, ಬಿಸ್ಕತ್, ಬೆಳಗ್ಗೆ ಗಂಟೆ 7.30 ರಿಂದ 10 ಗಂಟೆಯ ತನಕ 3ಸಾವಿರ ಮಂದಿಗೆ ಇಡ್ಲಿ ಸಾಂಬಾರು, ಗೋಳಿಬಜೆ ಚಟ್ನಿ, ಕೇಸರಿಬಾತ್, ಪುದೀನ ರೈಸ್ಬಾತ್, ಬಾದಾಮಿ ಹಾಲು/ಚಹಾ ಬಿಸ್ಕತ್, 2500 ಮೊಟ್ಟೆ, ಬೆಳಿಗ್ಗೆ ಗಂಟೆ 11ಕ್ಕೆ 500 ಕ್ರೀಡಾ ನಿರ್ಣಾಯಕರಿಗೆ ಕಲ್ಲಂಗಡಿ ಜ್ಯೂಸ್, ಮಧ್ಯಾಹ್ನ ಗಂಟೆ 12.30 ರಿಂದ 2.30 ರ ತನಕ 5ಸಾವಿರ ಮಂದಿಗೆ ಊಟ, ಉಪ್ಪಿನಕಾಯಿ, ಮುದ್ದೆ ಸಾರು, ಜೋಳ ರೊಟ್ಟಿ ಚಟ್ನಿ, ಅನ್ನ, ಪಲ್ಯ, ಸಾರು, ಸಾಂಬಾರು, ಮೆಣಸುಕಾಯಿ, ಮಜ್ಜಿಗೆ, ಪಾಯಸ. ಸಂಜೆ ಗಂಟೆ 5ಕ್ಕೆ 3ಸಾವಿರ ಮಂದಿಗೆ ನೀರುಳ್ಳಿ ಬಜೆ, ಕಾಫಿ ಚಹಾ ಕಷಾಯ ಮತ್ತು ರಾತ್ರಿ ಗಂಟೆ 7.30ಕ್ಕೆ 1ಸಾವಿರ ಮಂದಿಗೆ ರೈಸ್ ಬಾತ್ ಪಾರ್ಸೆಲ್ ಇರಲಿದೆ ಎಂದು ಕ್ರೀಡಾಕೂಟ ಆಹಾರ ಸಮಿತಿ ಸಂಚಾಲಕ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.