ಅಧ್ಯಕ್ಷ ಪ್ರವೀಣಚಂದ್ರ ಆಳ್ವ, ಉಪಾಧ್ಯಕ್ಷ ಅಂಬ್ರೋಸ್ ಡಿ ಸೋಜ
ಪುತ್ತೂರು: ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ೫ ವರ್ಷಗಳ ಅವಧಿಯ ನೂತನ ಅಧ್ಯಕ್ಷರಾಗಿ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಎ.ಎಂ. ಮುಂಡೇಲು, ಉಪಾಧ್ಯಕ್ಷರಾಗಿ ಅಂಬ್ರೋಸ್ ಡಿ.ಸೋಜ ಎನ್ ನಾರಾಜಿಲಮೂಲೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಒಟ್ಟು 13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದಲ್ಲಿ ಸಾಮಾನ್ಯ ಸ್ಥಾನಗಳಿಗೆ ಹಾಲಿ ನಿರ್ದೇಶಕರಾದ ಶಿವರಾಮ ಭಟ್ ಚಿಕ್ಕಮುಂಡೇಲು, ಪ್ರವೀಣಚಂದ್ರ ಆಳ್ವ ಎ.ಎಂ ಮುಂಡೇಲು, ಅಂಬ್ರೋಸ್ ಡಿ’ಸೋಜ ನಾರಾಜಿಲಮೂಲೆ, ವಿಜಯಕುಮಾರ್ ರೈ ಅಡೀಲು, ಅಮ್ರಿತ್ ರೈ ಅಗರ್ತಬೈಲು, ಸತೀಶ್ ಶೆಟ್ಟಿ ಸೇಡಿಕುಮೇರು, ದೇವದಾಸ ರೈ ಗುಂಡ್ಯಡ್ಕ, ಪರಿಶಿಷ್ಟ ಪಂಗಡದಿಂದ ರಾಜೇಶ್ ಎಂ., ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನದಿಂದ ಚಂದಪ್ಪ ಪೂಜಾರಿ ಕಾಡ್ಲ, ಹಿಂದುಳಿದ ವರ್ಗ ‘ಬಿ’ ಮೀಸಲು ಸ್ಥಾನದಿಂದ ಅಂಬ್ರೋಸ್ ಡಿ’ಸೋಜ ಅಗರ್ತಬೈಲು, ಮಹಿಳಾ ಸ್ಥಾನದಿಂದ ವಾರಿಜ ರೈ ಅಂಗಾರಳಿಕೆ ಹಾಗೂ ಲಕ್ಷ್ಮೀ ಜಿ. ರೈ ಅಡೀಲುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದೇ ಇದ್ದು ಖಾಲಿಯಿದೆ. 12 ಸ್ಥಾನಗಳಲ್ಲಿ ಶಿವರಾಮ ಭಟ್ ಪಕ್ಷೇತರ ಅಭ್ಯರ್ಥಿಯಾಗಿದ್ದು ಉಳಿದ ಎಲ್ಲಾ ೧೧ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನ.೨೯ರಂದು ಸಂಘ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪ್ರವೀಣಚಂದ್ರ ಆಳ್ವರವರನ್ನು ಚಂದಪ್ಪ ಪೂಜಾರಿ ಕಾಡ್ಲ ಸೂಚಿಸಿ, ಸತೀಶ್ ಶೆಟ್ಟಿ ಅನುಮೋದಿಸಿದರು. ಉಪಾದ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅಂಬ್ರೋಸ್ ಡಿ’ಸೋಜರವರನ್ನು ಅಮ್ರಿತ್ ರೈ ಸೂಚಿಸಿ, ದೇವದಾಸ ರೈ ಅನುಮೋದಿಸಿದರು.
ನೂತನ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಸಂಘವನ್ನು ಪ್ರತಿಯೊಬ್ಬರ ಸಹಕಾರ ಅಗತ್ಯ. ಸಂಘವು ಅಧಿಕ ಲಾಭಗಳಿಗೆ ಅಭಿವೃದ್ಧಿಯತ್ತ ಸಾಗಲು ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಚಂದಪ್ಪ ಪೂಜಾರಿ ಕಾಡ್ಲ ಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಘವು ಕೆಲವೊಂದು ಅಭಿವೃದ್ಧಿ ಕಾರ್ಯಗಳು ಆಗಿದೆ. ಮುಂದಿನ ಅವಧಿಯಲ್ಲಿಯೂ ಸಂಘವು ಇನ್ನಷ್ಟು ಉನ್ನತಿಯತ್ತ ಸಾಗುವಲ್ಲಿ ಎಲ್ಲರೂ ಸಹಕರಿಸುವುಂತೆ ವಿನಂತಿಸಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಜನಾರ್ದನ ವಂದಿಸಿದರು. ಹಾಲು ಪರೀಕ್ಷಕ ಮನೋಜ್ ಕುಮಾರ್ ಸಹಕರಿಸಿದರು.