ಪುತ್ತೂರು: ಮೂಡಬಿದ್ರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್ ನಲ್ಲಿ ನ.25 ರಂದು ನಡೆದ ಇನ್ಸೆಫ್ ರೀಜನಲ್ ಫೇರ್ ನಲ್ಲಿ ಸುದಾನ ಶಾಲೆಯಿಂದ ಆಯ್ಕೆಯಾಗಿ ಭಾಗವಹಿಸಿದ್ದ 10 ವಿದ್ಯಾರ್ಥಿಗಳಲ್ಲಿ ಏಳು ವಿದ್ಯಾರ್ಥಿಗಳು ಬಹುಮಾನ ಪಡೆದಿರುತ್ತಾರೆ. 8ನೇ ತರಗತಿಯ ಅದ್ವಿಜ್ ಸಜೇಶ್ ಪ್ರೊಜೆಕ್ಟ್ – ಅಂಡರ್ ವಾಟರ್ ರೆಸ್ಪಿರೇಟರ್ ಗೆ ಬೆಳ್ಳಿಯ ಪದಕ ಪಡೆದು ಜ.26ರಂದು ಗುಜರಾತ್ ನ ರಾಜ್ ಕೋಟ್ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
6ನೇ ತರಗತಿಯ ವಿದ್ಯಾರ್ಥಿನಿ ಸೃಷ್ಠಿ ಎನ್.ವಿ ಪ್ರೊಜೆಕ್ಟ್ – ಸ್ಮಾರ್ಟ್ ಎಲ್.ಪಿ.ಜಿ ಗ್ಯಾಸ್ ಸ್ಟವ್’ ಗೆ ಬೆಳ್ಳಿಯ ಪದಕ, ಆದಿತ್ಯ ಕೆ ಪ್ರೊಜೆಕ್ಟ್ – ಆಟೊಮ್ಯಾಟಿಕ್ ಡಿಮ್ ಡಿಪ್ ಸಿಸ್ಟಮ್ ಫಾರ್ ವೆಹಿಕಲ್ಸ್ ಗೆ ಕಂಚಿನ ಪದಕ, ಶಮಿತಾ ಎಂ ಪ್ರೊಜೆಕ್ಟ್ – ’ಸ್ಟಾರ್ಟ್ ಮೂವೇಬಲ್ ಬ್ರಿಡ್ಜ್’ ಗೆ ಗೌರವಾನ್ವಿತ ಪ್ರಶಸ್ತಿ, ನೇ ತರಗತಿಯ ಪ್ರದ್ಯುಮ್ನ ಡಿ ಆಚಾರ್ಯ ಪ್ರೊಜೆಕ್ಟ್ – ’ಆಟೊಮ್ಯಾಟಿಕ್ ಹೈಟ್ ಇನ್ ಕ್ರೀಸಿಂಗ್ ಬ್ರಿಡ್ಜ್’ ಗೆ ಗೌರವಾನ್ವಿತ ಪ್ರಶಸ್ತಿ, 9ನೇ ತರಗತಿಯ ಜೆರಿಟ್ ಪಿ.ಜೆ ಪ್ರೊಜೆಕ್ಟ್ – ಡ್ರೆವರ್ ಮಾನಿಟರಿಂಗ್ ಗ್ಲಾಸ್ ಸ್’ ಗೆ ಗೌರವಾನಿತ್ವ ಪ್ರಶಸ್ತಿ ಮತ್ತು 10ನೇ ತರಗತಿಯ ರಿಶಲ್ ಎಲ್ಸಾ ಬೆನ್ನಿ ಪ್ರೊಜೆಕ್ಟ್ – ’ಇಂಟಿಗ್ರೇಟೆಡ್ ಸರ್ಕ್ಯುರಲ್ ಪಿರಮಿಡ್ ಫಾರ್ಮಿಂಗ್’ ಗೆ ಗೌರವಾನ್ವಿತ ಪ್ರಶಸ್ತಿ ಲಭಿಸಿದೆಯೆಂದು ಶಾಲಾ ಮುಖ್ಯೋಪಧ್ಯಾಯಿನಿ ಶೋಭಾ ನಾಗರಾಜ್ ರವರು ತಿಳಿಸಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕಿಯರಾದ ಶ್ಯಾಮಲ.ಡಿ. ಬಂಗೇರ, ರೀನ ಅಲೆಕ್ಸ್ ಮತ್ತು ಹರ್ಷಿತ ಪ್ರಜ್ವಲ್ ರವರು ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.