ಕಾಣಿಯೂರು: ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಸಂಜೀವಿನಿ ಮೃತ್ಯುಂಜಯ ಹೋಮವು ನ 28ರಂದು ನಡೆಯಿತು. ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸಂಜೀವಿನಿ ಮೃತ್ಯುಂಜಯ ಹೋಮದ ಪ್ರಾರಂಭ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಹೋಮ ಪೂರ್ಣಾಹುತಿ, ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೃಷ್ಣಪ್ಪ ಗೌಡ ಬೀರ್ನೇಲು, ವಸಂತ ಗೌಡ ಬೀರ್ನೇಲು, ಪುರುಷೋತ್ತಮ ಗೌಡ ಬೀರ್ನೇಲು, ಕುಸುಮಾಧರ ಗೌಡ ಬೀರ್ನೇಲು,ಲಕ್ಷ್ಮೀ ಬಾಲಕೃಷ್ಣ ಬೀರ್ನೆಲು, ಜಯಶೀಲ ಕೃಷ್ಣಪ್ಪ ಗೌಡ ಜಾಲ್ಸೂರು, ಪಾರ್ವತಿ ಬೆಳಿಯಪ್ಪ ಗೌಡ ಬೀರ್ನೆಲು, ಕ್ಷೇತ್ರದ ಪ್ರಧಾನ ಅರ್ಚಕ ಚಿದಾನಂದ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಶಾಂತ್ ‘ಆದಿ’ ಮುರುಳ್ಯ,ಉಪಾಧ್ಯಕ್ಷರಾದ ಪದ್ಮಯ್ಯ ಗೌಡ ಅನಿಲ, ದಿನೇಶ್ ಪೈಕ, ದಿನೇಶ್ ಮಾಳ, ಕಾರ್ಯದರ್ಶಿ ಹರೀಶ್ ಪೈಕ, ಜತೆ ಕಾರ್ಯದರ್ಶಿ ಹರೀಶ್ ಬೀರ್ನೆಲು, ಕೋಶಾಧಿಕಾರಿ ಲಕ್ಷ್ಮಣ ಗೌಡ ಪುಣ್ಚತ್ತಾರು ಸೇರಿದಂತೆ ಜೀರ್ಣೋದ್ದಾರ ಸಮಿತಿ ಗೌರವ ಸಲಹೆಗಾರರು, ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು.