ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಸಹಯೋಗದಿಂದ ಉಪನ್ಯಾಸ ಮಾಲಿಕೆ ಅಯೋಧ್ಯಾ ರಾಮ – ಉದ್ಘಾಟನೆ

0

ಪುತ್ತೂರು: ರಾಮನ ಆದರ್ಶಗಳು ಮತ್ತು ಮೌಲ್ಯಗಳು ಜಗತ್ತಿಗೆ ಸ್ಪೂರ್ತಿಯ,ದೀರ್ಘಕಾಲಿಕ ಮೂಲವಾಗಿ ಉಳಿಯುತ್ತದೆ. ಇಡೀ ಮನುಷ್ಯ ಕುಲಕ್ಕೆ ಆದರ್ಶ ಪುರುಷನಾದ ಶ್ರೀರಾಮಚಂದ್ರನ ಜೀವನ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಭಗವಂತನಾದರೂ ಸ್ವತಃ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ.ರಾಮನು ಆದರ್ಶ ಪುತ್ರನಾಗಿ, ಮರ್ಯಾದಾ ಪುರುಷೋತ್ತಮನಾಗಿ, ಒಬ್ಬ ಶ್ರೇಷ್ಠ ರಾಜನಾಗಿ ತನ್ನ ಪ್ರಜೆಗಳನ್ನು ಸದಾ ಕಾಪಾಡಿ ವಚನಪರಿಪಾಲಕನಾಗಿ ಜೀವನದ ಸುಖ ದುಃಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಅತ್ಯಂತ ಗಾಂಭೀರ್ಯದಿಂದ ಸರಳವಾಗಿ ಎಲ್ಲರಿಗೂ ಪ್ರಿಯನಾದವನು. ಎಂದು ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ‍್ಯಕಾರಿಣಿ ಸದಸ್ಯರಾದ ಗಣರಾಜ್ ಭಟ್ ಕೆದಿಲ ಇವರು ಹೇಳಿದರು.


ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಿದ ರಾಮನ ವ್ಯಕ್ತಿತ್ವದ ಸಮಗ್ರ ವರ್ಣನೆಯ ಉಪನ್ಯಾಸ ಮಾಲಿಕೆ ಅಯೋಧ್ಯಾ ರಾಮ ಕಾರ‍್ಯಕ್ರಮದಲ್ಲಿ ,ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಎಂಬ ವಿಚಾರವಾಗಿ ಅವರು ಮಾತನಾಡಿದರು.


ರಾಮನು ತನ್ನ ಜನರಿಗೆ ಮಾತ್ರವಲ್ಲ,ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳಿಗೆ ಹಿತಚಿಂತಕನಾದ ಸರಳ ವ್ಯಕ್ತಿತ್ವ.ರಾಮನು ಸ್ಥೂಲ ದೃಷ್ಟಿಗೆ ಮನುಷ್ಯ,ಸೂಕ್ಷ್ಮ ದೃಷ್ಟಿಗೆ ದೇವತೆ,ಪರಾದೃಷ್ಟಿಗೆ ಪರಮ ಜ್ಯೋತಿಯೇ ಆಗಿದ್ದಾನೆ. ಈ ಯುಗವು ’ಪರಿವರ್ತನೆಯ ಯುಗ’. ಎಲ್ಲರಲ್ಲೂ ರಾಮನಂತಹ ಗುಣವಿದೆ, ಎಲ್ಲರಲ್ಲೂ ರಾವಣನಂತಹ ಗುಣವಿದೆ. ನಮ್ಮಲ್ಲಿನ ಗುಣಗಳನ್ನು ಪರಿವರ್ತನೆಗೊಳಿಸಿಕೊಂಡಾಗ ಮಾತ್ರ ನಾವು ರಾಮನಾಗಲೂ ಸಾಧ್ಯ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ನಾಶಮಾಡಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ನಾವು ಕೂಡ ರಾಮನ ಸ್ವಭಾವವನ್ನು ಹೊಂದಬಹುದು. ಬದಲಾಗಿ, ದುಶ್ಚಟಗಳನ್ನೇ ರೂಢಿಸಿಕೊಂಡರೆ ರಾವಣನಂತೆ ಸ್ವಭಾವವನ್ನು ಹೊಂದಬೇಕಾಗುತ್ತದೆ. ಎಲ್ಲರಲ್ಲೂ ಸದ್ಗುಣಗಳಿವೆ.ಅವುಗಳನ್ನು ಅರಿತು, ರೂಢಿಸಿಕೊಂಡು ಮುಂದೆ ಸಾಗೋಣ. ಎಂದು ಹೇಳಿದರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿ ಡಾ.ಕೆ.ಯಂ.ಕೃಷ್ಣ ಭಟ್ ಕಾರ‍್ಯಕ್ರಮವನ್ನು ಉದ್ಘಾಟಿಸಿದರು.
ಕಾರ‍್ಯಕ್ರಮದಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇದರ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು,ಸದಸ್ಯರು,ಮುಖ್ಯಗುರುಗಳು,ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ‍್ಯಕ್ರಮದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಗಣಿತಶಾಸ್ತ್ರ ಉಪನ್ಯಾಸಕಿ ರೇಣುಕಾ ವಂದಿಸಿದರು.ಜೀವಶಾಸ್ತ್ರ ಉಪನ್ಯಾಸಕಿ ಮಧುರಾ ಕಾರ‍್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here