ಪರ್ಲಡ್ಕ ಪ್ರಥಮ, ಪಡೀಲ್ ದ್ವಿತೀಯ, ಸಾಲ್ಮರ ತೃತೀಯ
ಪುತ್ತೂರು : ’ಸಮಸ್ತ’ ದ ಅದೀನದ ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಕೆಮ್ಮಾಯಿ ಜುಮ್ಮಾ ಮಸೀದಿಯ ಸಭಾಂಗಣದಲ್ಲಿ ನಡೆದ ಪುತ್ತೂರು ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ದ್ವಿದಿನ ಇಸ್ಲಾಮಿಕ್ ಸಾಹಿತ್ಯ ಕಲಾ ಸ್ಪರ್ಧೆ ’ಮುಸಾಬಖ -2023’ ಕಾರ್ಯಕ್ರಮವು ಸಮರೋಪಗೊಂಡಿತು.
ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಹನೀಫ್ ದಾರಿಮಿ ಪಡೀಲ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕೆಮ್ಮಾಯಿ ಮುದರ್ರಿಸ್ ಇರ್ಶಾದ್ ದಾರಿಮಿ ದುವಾಶೀರ್ವಚನ ನೀಡಿದರು.
ಕೆಮ್ಮಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಬಶೀರ್ ಹಾಜಿ ದಾರಂದಕುಕ್ಕು, ಪ್ರಮುಖರಾದ ಹಸನ್ ಹಾಜಿ ಗಾರ್ಬಲ್, ಅಬ್ದುಲ್ ಲತೀಫ್ ಹಾಜಿ , ಮೂಸಾ ಹಾಜಿ, ಮದ್ರಸ ಮ್ಯಾನೇಜ್ ಮೆಂಟ್ ಜಿಲ್ಲಾ ನಾಯಕರಾದ ಹಸನಬ್ಬ ಗುಡ್ಡೆಮನೆ ಫರಂಗಿಪೇಟೆ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಶರೀಫ್ ಮುಕ್ರಂಪಾಡಿ, ಪುತ್ತೂರು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ನ ಹಾಜಿ ಅಬ್ದುಲ್ ಅಝೀಝ್ ಬಪ್ಪಳಿಗೆ, ಅಬ್ದುಲ್ ಹಮೀದ್ ಲವ್ಲಿ,ಮುಹಮ್ಮದ್ ಹಾಜಿ ಪಡೀಲ್, ಅಬ್ದುರ್ರಹ್ಮಾನ್ ಅಝಾದ್, ಆರ್ .ಪಿ.ಅಬ್ದರ್ರಝಾಕ್ ಪಡೀಲ್, ಎಂ.ಎಸ್.ಅಬ್ದುಲ್ ಹಮೀದ್ ಪುಣಚ,ಶಾಹುಲ್ ಹಮೀದ್ ಮಿತ್ತೂರು,ಅಬೂಬಕ್ಕರ್ ನಾಟೆಕಲ್, ಹನೀಫ್ ಮಂಜ, ಶಾಫಿ ಮಾಳಿಗೆ ಪುಣಚ,ಡಿ.ಕೆ.ಉಮರ್, ಡಿ.ಕೆ.ಅಶ್ರಫ್,ಅರಮನೆ ಅಬ್ದುಲ್ ರಹೀಮಾನ್ ಹಾಜಿ, ಶೇಖ್ ಜೈನುದ್ದೀನ್, ಶರೀಫ್ ರೋಯಲ್, ಅಶ್ರಫ್ ನದಿಮಾರ್, ಅಹ್ಮದ್ ಕರೀಮ್ ಬೀಟಿಗೆ, ಸ್ವಾಗತ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಉದಯ ಕಲ್ಲೇಗ, ಹುಸೈನ್ ಪಡೀಲ್, ಶಂಸುದ್ದೀನ್ ಓಝೋನ್ ಕಲ್ಲೇಗ, ಮುಫತ್ತಿಷ್ ಖಾಸಿಂ ಮುಸ್ಲಿಯಾರ್, ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಮುಖರಾದ ಬಶೀರ್ ದಾರಿಮಿ ಸಾಲ್ಮರ, ಮುಸ್ತಫಲ್ ಫಾಝಿ ಪರ್ಲಡ್ಕ, ಶಾಫಿ ಮುಸ್ಲಿಯಾರ್ ಬಪ್ಪಳಿಗೆ, ಅಬ್ದುಲ್ ಹಮೀದ್ ಹನೀಫಿ ಶಾಂತಿನಗರ, ಸುಲೈಮಾನ್ ದಾರಿಮಿ ಮಂಜ, ಅಶ್ರಫ್ ದಾರಿಮಿ ಬೀಟಿಗೆ, ನೌಶಾದ್ ಯಮಾನಿ ದರ್ಬೆ ಮೊದಲಾದವರು ಉಪಸ್ಥಿತರಿದ್ದರು.
ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿ ಮಾತನಾಡಿ 2 ದಿನಗಳ ಕಾಲ ನಡೆದ ಮುಸಾಬಖ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕೆ.ಎಂ.ಎ.ಕೊಡುಂಗಾಯಿ ವಿವಿಧ ಕಾರ್ಯಕ್ರಮ ನಿರ್ವಹಿಸಿ, ಕೊನೆಗೆ ವಂದಿಸಿದರು.
ಪರ್ಲಡ್ಕ ಪ್ರಥಮ, ಪಡೀಲ್ ದ್ವಿತೀಯ, ಸಾಲ್ಮರ ತೃತೀಯ:
ಒಟ್ಟು ನಾಲ್ಕು ವೇದಿಕೆಗಳಲ್ಲಿ ಕಿಡ್ಡೀಸ್, ಸಬ್ ಜೂನಿಯರ್, ಜೂನಿಯರ್, ಸೀನಿಯರ್ ,ಸೂಪರ್ ಸೀನಿಯರ್, ಜನರಲ್, ಅಲುಮ್ನಿ ಮೊದಲಾದ ವಿಭಾಗಗಳ ವಿವಿಧ ಭಾಷೆಗಳಲ್ಲಿ ಸುಮಾರು 85 ವಿಷಯಗಳಲ್ಲಿ ’ಮುಸಾಬಖ -2023’ ಸ್ಪರ್ಧೆಗಳು ನಡೆಯಿತು.
ಪುತ್ತೂರು ರೇಂಜ್ ವ್ಯಾಪ್ತಿಯ ಒಟ್ಟು 26 ಮದ್ರಸಗಳ 730 ಸ್ಪರ್ಧಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಸ್ಪರ್ಧೆ ಯಲ್ಲಿ ಪರ್ಲಡ್ಕ ಹಯಾತುಲ್ ಇಸ್ಲಾಂ ಮದ್ರಸ ಪ್ರಥಮ , ಪಡೀಲ್ ಮುಈನುಲ್ ಇಸ್ಲಾಂ ಮದ್ರಸ ದ್ವಿತೀಯ ಹಾಗೂ ಸಾಲ್ಮರ ಮಿಸ್ಬಾಹುಲ್ ಹುದಾ ಮದ್ರಸ ತೃತೀಯ ಸ್ಥಾನವನ್ನು ಪಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತ ಮದ್ರಸಗಳಿಗೆ ಚಾಂಪಿಯನ್ ಮತ್ತು ರನ್ನರ್ ಅಪ್ ಪ್ರಶಸ್ತಿ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಹಾಗೂ ವಿವಿಧ ವಿಷಯಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಲವು ಗಣ್ಯರನ್ನು ಸಮಾರಂಭದಲ್ಲಿ ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮದ್ರಸ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಹಲವಾರು ಉಲಮಾ ,ಉಮರಾ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಎರಡು ದಿನಗಳಲ್ಲಿ ಕೆಮ್ಮಾಯಿ ಜಮಾಅತ್ ಸಮಿತಿ ವತಿಯಿಂದ ಅನ್ನದಾನ ಮತ್ತು ವಿವಿಧ ಉಪಹಾರಗಳನ್ನು ನೀಡಲಾಯಿತು.