ಆಲಂಕಾರು:ಆಲಂಕಾರು ವಲಯ ಬಿಲ್ಲವ ಸಂಘ ಆಲಂಕಾರು, ಪೆರಾಬೆ- ಕುಂತೂರು,ಹಳೆನೇರೆಂಕಿ ಮತ್ತು ಕೊಯಿಲ,ರಾಮಕುಂಜ ಗ್ರಾಮ ಸಮಿತಿಗಳು ಹಾಗು ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಜೀಯವರ 169 ನೇ ಜಯಂತಿ ಆಚರಣೆಯ ಪ್ರಯುಕ್ತ ಗುರುಪೂಜೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ,ಸಾಧಕರಿಗೆ ಸನ್ಮಾನ ಹಾಗು ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಡಿ.3 ರಂದು ಆದಿತ್ಯವಾರ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ ದಯಾಳು ಉಪಾಧ್ಯಾಯ ರೈತ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 8:30 ರಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿವರ ಭಜನೆ ನಂತರ ಗುರುಪೂಜೆ , ಸಂಗೀತ ರಸಮಂಜರಿ ರಾಜ್ಯಮಟ್ಟದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಪುರಸ್ಕೃತೆ ಶ್ರೇಯಾ ಸಿ. ಪಿ ಕಡಬ, ರಾಜ್ಯಮಟ್ಟದ ಕರ್ನಾಟಕ ಕಲಾ ಸಿರಿ ರತ್ನ ಪ್ರಶಸ್ತಿ ಪುರಸ್ಕೃತ ಶ್ರವಣ್ ಪೂಜಾರಿ ಕಡಬ, ಅಶೋಕ್ ಆಚಾರ್ಯ ನೆಲ್ಯಾಡಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ನಂತರ ಸಭಾಕಾರ್ಯಕ್ರಮ ನಡೆಯಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ದಿನೇಶ್ ಕೇಪುಳು ಸಭಾಧ್ಯಕ್ಷತೆ ವಹಿಸಲಿದ್ದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಲಿದ್ದಾರೆ. ಕಲಬುರ್ಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಜಯ ಕರ್ನಾಟಕ ದಿನಪತ್ರಿಕೆಯ ಸುಧಾಕರ ಸುವರ್ಣ ದಿಕ್ಸೂಚಿ ಭಾಷಣ ಮಾಡಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಅನುಗ್ರಹ ಕನ್ಟ್ರಕ್ಷನ್ ನ ಡಾ| ರವಿ ಕಕ್ಯಪದವು, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಪುತ್ತೂರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ, ಅಮರನಾಥ್ ಕರ್ಕೇರ ಆಲಂಕಾರು,ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಂಞಲಡ್ಡ, ಆಲಂಕಾರು ಕೋಟಿ-ಚೆನ್ನಯ ಮಿತ್ರವೃಂದ ಇದರ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಆಲಂಕಾರಿನ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷ ವಿನುತಾ ಉಮೇಶ್,ಬಿಲ್ಲವ ಮಹಿಳಾ ವೇದಿಕೆ ಆಲಂಕಾರು ವಲಯದ ವಲಯ ಸಂಚಾಲಕರಾದ ಪ್ರಮೀಳಾ ಜಯಂತ್ ನೆಕ್ಕಿಲಾಡಿ, ಪೆರಾಬೆ -ಕುಂತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಹರ್ಷಿತ್ ಮಾಯಿಲ್ಗ ,ಹಳೆನೇರೆಂಕಿ ಬಿಲ್ಲವ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಬರೆಂಬೆಟ್ಟು, ಕೊಯಿಲ- ರಾಮಕುಂಜ ಬಿಲ್ಲವ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಅಂಬಾ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಪ್ರಸಾದ ಭೋಜನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷ ದಿನೇಶ್ ಕೇಪುಳು, ಆಲಂಕಾರು ವಲಯದ ಬಿಲ್ಲವ ಗ್ರಾಮ ಸಮಿತಿಯ ಸಂಚಾಲಕ ದಯಾನಂದ ಕರ್ಕೇರ, ಆಲಂಕಾರು ಬಿಲ್ಲವ ಸಂಘದ ಕೋಶಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಆಲಂಕಾರು ಬಿಲ್ಲವ ಸಂಘದ ಕಾರ್ಯದರ್ಶಿ ಜಯಂತ ಎನ್. ನೆಕ್ಕಿಲಾಡಿ, ಆಲಂಕಾರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ದಾಮೋದರ ನೆಕ್ಕಿಲಾಡಿ, ಆಲಂಕಾರು ಬಿಲ್ಲವ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಪೂಜಾರಿ ಕೇಪುಳು – ಹೊಸಮನೆ, ಆಲಂಕಾರು ಬಿಲ್ಲವ ಸಂಘದ ಉಪಾಧ್ಯಕ್ದ ಚಂದ್ರಶೇಖರ ಪಟ್ಟೆಮಜಲು, ಆಲಂಕಾರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಾ ಜಯಂತ್, ಆಲಂಕಾರು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಕೇಪುಳು ಹಾಗೂ ಸರ್ವಸದಸ್ಯರು ಹಾಗು ಬಿಲ್ಲವ ಸಂಘ ಆಲಂಕಾರು ವಲಯದ ಎಲ್ಲಾ ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.