ಪುತ್ತೂರು: ವಿಶೇಷ ಕಾರಣಿಕತೆಯನ್ನು ಹೊಂದಿರುವ ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆನಿಂತು ಭಕ್ತರನ್ನು ಸಲಹುತ್ತಿರುವ ಶ್ರೀ ಮಲರಾಯ ದೈವಸ್ಥಾನದಲ್ಲಿ ಡಿ.5 ಮತ್ತು 6ರಂದು ಶ್ರೀ ದೈವಗಳಿಗೆ ನೇಮೋತ್ಸವ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಡಿ.01 ರಂದು ವೈಧಿಕ ಕಾರ್ಯಕ್ರಮಗಳು ನಡೆಯಿತು.
ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂರೇಲು ಕುಟುಂಬಸ್ಥರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿಯ ಮೊಗಕ್ಕೆ ಬೆಳ್ಳಿಯ ಕವಚ ಅರ್ಪಣೆ ಹಾಗೇ ವರ್ಣರ ಪಂಜುರ್ಲಿ ಮತ್ತು ಕುಪ್ಪೆ ಪಂಜುರ್ಲಿಯ ಕತ್ತಿಗೆ ಬೆಳ್ಳಿ ಕವಚ ಅರ್ಪಣೆ ಹಾಗೇ ಕ್ಷೇತ್ರದ ಶ್ರೀ ಕೊರಗಜ್ಜ ದೈವದ ಮೂರ್ತಿಗೆ ಬೆಳ್ಳಿಯ ಕಣ್ಣು ಮತ್ತು ಮೂಗು ಅರ್ಪಣೆ ನಡೆಯಿತು. ಇದಲ್ಲದೆ ಕೂರೇಲು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಂಜೀವ ಪೂಜಾರಿ ಕೂರೇಲುರವರಿಂದ ಕೂರೇಲು ಶ್ರೀ ಮಲರಾಯ ದೈವಕ್ಕೆ ಬೆಳ್ಳಿಯ ಎದೆ ಕವಚ ಅರ್ಪಣೆ ನಡೆಯಿತು. ತಂತ್ರಿಗಳು ವೈಧಿಕ ವಿಧಿ ವಿಧಾನದ ಮೂಲಕ ಶ್ರೀ ದೈವಗಳಿಗೆ ಇದನ್ನು ಅರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೂರೇಲು ಕುಟುಂಬಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು. ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಸರಸ್ವತಿ ಸಂಜೀವ ಪೂಜಾರಿ, ಹರ್ಷಿತ್ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.