ಕೌಡಿಚ್ಚಾರ್:ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರೋರ್ವರು ಡೆತ್‌ನೋಟು ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯ, ಮಾಡ್ನೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಶಂಕರ(41ವ.)ಮೃತಪಟ್ಟವರು.ಘಟನೆ ಕುರಿತು ಮೃತರ ಪತ್ನಿ ವನಿತಾ ಅವರು ನೀಡಿರುವ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡನೇ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿದ್ದ ಶಂಕರ ಅವರು ಈ ಹಿಂದೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನೆಟ್ಟಣಿಗೆಮುಡ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ಅಭ್ಯರ್ಥಿ ಪಕೀರ ಅವರ ವಿರುದ್ಧ ಸ್ಪರ್ಧಿಸಿ ಪರಾಜಿತರಾಗಿದ್ದರು.ಸುಮಾರು 05 ವರ್ಷಗಳ ಹಿಂದೆ ದೋಳಂತೋಡಿ ಎಂಬಲ್ಲಿ ಜಾಗ ಖರೀದಿ ಮಾಡಿದ್ದು ಸೊಸೈಟಿ ಮತ್ತು ಇತರೆ ಸಂಘಗಳಲ್ಲಿ ಸಾಲ ಮಾಡಿದ್ದರು.
ಇತ್ತೀಚೆಗೆ ಸಾಲದ ಬಗ್ಗೆ ಹಾಗೂ ಅದನ್ನು ಕಟ್ಟುವ ಬಗ್ಗೆ ಯೋಚನೆ ಮಾಡುತ್ತಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ದ.3ರಂದು ರಾತ್ರಿ 12 ಗಂಟೆಗೆ ತಾನು ಮಲಗಿದ ನಂತರ, ನಾನು ಮಲಗಿದ ರೂಮಿನ ಬಾಗಿಲನ್ನು ಹೊರಗಡೆಯಿಂದ ಚಿಲಕ ಹಾಕಿದ್ದಲ್ಲದೆ ಮನೆಯ ಎದುರಿನ ಬಾಗಿಲ ಚಿಲಕವನ್ನೂ ಹಾಕಿ ಮನೆಯ ಒಳಗಡೆ ಬೈರಾಸನ್ನು ಮನೆಯ ಅಡ್ಡಕ್ಕೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ಮೃತರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ದ.3ರ ಬೆಳೆಗ್ಗಿನ 4 ಗಂಟೆಗೆ ತಾನು ಎದ್ದು ನೋಡಿದಾಗ ಬಾಗಿಲು ಹಾಕಿದ್ದು,ಫೋನ್ ಮಾಡಿದಾಗ ರಿಂಗ್ ಅಗುವುದು ಕೇಳುತ್ತಿದ್ದು, ನಂತರ ನೆರೆ ಮನೆಯ ರಾಜೇಶ್‌ರವರಿಗೆ ಫೋನ್ ಮಾಡಿ ಬಾಗಿಲು ತೆಗಸಿ ಹೊರ ಬಂದು ನೋಡಿದಾಗ ಪತಿ ಶಂಕರ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕ್ಷಮಿಸು ವನಿತಾ…
`ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸು ವನಿತಾ..ಮಕ್ಕಳನ್ನು ನೋಡಿಕೋ’ ಎಂಬುದಾಗಿ ಡೆತ್‌ನೋಟ್ ಬರೆದಿಟ್ಟಿದ್ದದ್ದು ಪತ್ತೆಯಾಗಿದೆ.ವೀಪರಿತ ಸಾಲ ಮಾಡಿ ಸಾಲವನ್ನು ಕಟ್ಟಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ವನಿತಾ ಅವರು ತಿಳಿಸಿದ್ದಾರೆ.ಮೃತರು ಪತ್ನಿ ಹಾಗೂ ಪುತ್ರಿಯರಾದ ಚರಿಷ್ಮಾ, ರಿತಿಷ್ಮಾ ಹಾಗೂ ಪುತ್ರ ಆಯುಷ್ ಅವರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.