ಆತೂರು: ಎಸ್‌ಕೆಎಸ್‌ಎಸ್‌ಎಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ರಾಮಕುಂಜ: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ವಿದ್ಯಾರ್ಥಿ ಸಂಘಟನೆಯಾದ ಎಸ್‌ಕೆಎಸ್‌ಎಸ್‌ಎಫ್ ಇದರ ಶಾಖಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್‌ರವರು ಡಿ.3ರಂದು ಆತೂರಿನಲ್ಲಿ ಚಾಲನೆ ನೀಡಿದರು.

ಸಮಾರಂಭದಲ್ಲಿ ಜಮಾಅತ್ ಅಧ್ಯಕ್ಷರಾದ ಅಹ್ಮದ್ ಕುಂಞಿ ಯಚ್., ಶಾಖಾ ಅಧ್ಯಕ್ಷರಾದ ಬಿ.ಕೆ.ಅಬ್ದುಲ್ ರಜಾಕ್, ರೇಂಜ್ ಅಧ್ಯಕ್ಷರಾದ ಸಿದ್ದೀಕ್ ಫೈಝಿ ಕರಾಯ, ಹಂಝ ಸಖಾಫಿ, ಅಬ್ದುಲ್ ರಹಿಮಾನ್ ಝುಹ್ರಿ, ಝಕರಿಯ್ಯಾ ಮುಸ್ಲಿಯಾರ್, ಬಿ.ಆರ್.ಅಬ್ದುಲ್ ಖಾದರ್, ಮುನೀರ್, ಅಬ್ದುಲ್ ಅಝೀಝ್ ಪಾಲ್ತಾಡಿ ಹಾಗೂ ಇತರೇ ಮುಖಂಡರು ಉಪಸ್ಥಿತರಿದ್ದರು. ಸಿದ್ದೀಕ್ ಎನ್., ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here