ಕಡಬ ಸರಕಾರಿ ಪ್ರೌಢಶಾಲೆಯ ಚರಿಷ್ಮಾ ನೂತನ ಕೂಟ ದಾಖಲೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಡಿಸೆಂಬರ್ 3 ಮತ್ತು 4 ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆತಿಥ್ಯದಲ್ಲಿ ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ರಾಜ್ಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಚರಿಷ್ಮಾ 1500 ಮೀಟರ್ ಓಟದಲ್ಲಿ 2016 ರಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಅರ್ಪಿತ ಎ ಬಿ ಅವರು ಸ್ಥಾಪಿಸಿದ ಕೂಟ ದಾಖಲೆಯಾದ 4.58.19 ನಿಮಿಷ ಸಮಯದ ವೇಗವನ್ನು ಮುರಿದು 4.55.10 ನಿಮಿಷದ ವೇಗದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮತ್ತು 3000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಮೂರು ಪದಕಗಳನ್ನು ಗೆದ್ದು ಮುಂದೆ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರೀಡಾ ಸಂಘಟಕರು ನೀಡಿದ ವಿಶೇಷ ಗೌರವದ ಬಹುಮಾನವನ್ನು ಪಡೆದಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಲೋಕೇಶ್ ತಂಟೆಪ್ಪಾಡಿಯವರು ತರಬೇತಿ ನೀಡಿರುತ್ತಾರೆ. ಶಾಲಾ ಉಪ ಪ್ರಾಂಶುಪಾಲರಾದ ಡಾ| ವೇದಾವತಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ. ಈಕೆ ಕಡಬ ತಾಲೂಕು ಬಂಟ್ರ ಗ್ರಾಮದ ಬಸವ ಪಾಲು ಸುಬ್ರಾಯ ಗೌಡ ಮತ್ತು ಸುಮತಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here