ಪುತ್ತೂರು: ರಾಜ್ಯ ಸರಕಾರ ಯಾವುದೇ ಕಾರಣ ನೀಡದೆ ಕೂಡಲೆ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ವರ್ಗಾಯಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ ದ.ಕ ಜಿಲ್ಲಾಧ್ಯಕ್ಷ ಡಾ.ವಿಶುಕುಮಾರ್ ಹೇಳಿದರು.
ತೀವ್ರ ಬರಗಾಲದಿಂದ ತೊಂದರೆಗೊಳಗಾಗಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ಹಾಗೂ ಕೇಂದ್ರದ ಒಕ್ಕೂಟ ಸರಕಾರ ವಿಫವಾಗಿದೆ ಎಂದು ಆರೋಪಿಸಿ ಡಿ.4ರಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ಮಂಗಳೂರಿನಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಬಹುತೆಕ ರಾಜ್ಯಕೆ ರಾಜ್ಯವೇ ಬರ ಪರಿಸ್ಥಿತಿಯಂದ ಕಂಗೆಟ್ಟಿದೆ. ಈ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ವರ್ಗಿಕರಿಸಲಾಗಿದೆ ಎಂದು ಅವರು ಹೇಳಿದರು. ಸುಮಾರು 48 ಲಕ್ಷ ಹೆಕ್ಟೆರ್ಗಿಂತ ಹೆಚ್ಚಿನ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಗೂಳಗಾಗಿವೆ. ಹಾನಿಗೂಂಡ ಬೆಳೆಗಳ ಒಟ್ಟು ಮೌಲ್ಯ 35162.05 ಕೋಟಿ ರೂಪಾಯಿಗಳಾಗಿವೆ. ಕೇಂದ್ರದಿಂದ ಬಂದ 10 ಸದಸ್ಯರ ಅಧ್ಯಯನ ತಂಡ ಬರ ಪರಿಸ್ಥಿತಿ ವಿಕ್ಷಣೆ ವೇಳೆ ನಮ್ಮಲ್ಲಿ ಬಂದಿರುವುದು ಹಸಿರು ಬರ ಎಂಬುವುದನ್ನು ಮನಗೊಳ್ಳಲು ವಿಫಲವಾಗಿದೆ ಎಂದು ಅವರು ಹೇಳಿದರು.
15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸು ಮಾಡಿರುವ ̧5495 ಕೋಟಿ ವಿಶೇಷ ಅನುದಾನವನ್ನು ಕರ್ನಾಟಕದಿಂದಲೆ ರಾಜ್ಯಸಭೆಗೆ ಆಯ್ಕೆಯಾಗಿ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ ಅವರೆ ತಿರಸ್ಕರಿಸಿದ್ದಾರೆ. ಇದನೆಲ್ಲಾ ರಾಜ್ಯ ಸರಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅತೀ ಶೀಘ್ರದಲ್ಲಿ ಅವರು ಈ ಬಗ್ಗೆ ಕಾರ್ಯಾಚರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಡಾ. ವಿಶುಕಮಾರ್ ಎಚ್ಚರಿಕೆ ನೀಡಿದರು.
ಪ್ರ.ಕಾರ್ಯದರ್ಶಿ ಖಲಂದರ್ ಎಲಿಮಲೆ, ಸಂಘಟನಾ ಕಾರ್ಯದರ್ಶಿ ಶಾನನ್ ಪಿಂಟೋ, ಜನಾರ್ದನ ಬಂಗೇರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾ ರಾಕೇಶ್
ಪ್ರಮುಖರಾದ ಕಬೀರ್ ಕಾಟಿಪಳ್ಳ, ಸೀಮಾ ಮಡಿವಾಳ್, ಗ್ಲಾವಿನ್ ಡಿಸೋಜಾ, ಫ್ಲೋರಿನ್ ಗೋವಸ್, ಥಾಮಸ್ ಮಥಿಯಾಸ್, ದೇವಿಪ್ರಸಾದ್ ಬಾಜಿಲಕೇರಿ, ನವಿನ ಕುಮಾರ್ ಪೂಜಾರಿ, ವಿವೇಕಾನಂದ ಸಾಲಿನ್ಸ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.