ಪಾಂಡಿ ಧರ್ಮದೈವ ನೇಮೋತ್ಸವ-ಪೂರ್ವಭಾವಿ ಸಭೆ-ಸಮಿತಿ ರಚನೆ

0

ಪುತ್ತೂರು: ಪಾಂಡಿ ಪರಿವಾರ ಬಂಟರ ತರವಾಡಿನಲ್ಲಿ 5 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಧರ್ಮದೈವದ ನೇಮೋತ್ಸವ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯು ಡಿ.5ರಂದು ನಡೆಯಿತು.

ಧರ್ಮದೈವ ನೇಮೋತ್ಸಕ್ಕೆ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಯಶವಂತ್‌ ನಾೖಕ್‌ ಬೆಳ್ಳರ್‌ ಕಜೆ ಪಾಂಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಾಂಡಿ ಪಾಲೆಕೊಚ್ಚಿ ರತನ್‌ ಕುಮಾರ್‌, ಕಾರ್ಯದರ್ಶಿಯಾಗಿ ಪಾಂಡಿ ತಲೆಮನೆ ಅಶೋಕ್‌ ನಾೖಕ್‌ ಎ ಆರ್‌, ಕೋಶಾಧಿಕಾರಿಯಾಗಿ ಪಾಂಡಿ ಚಲತ್‌ ಕಾಲ್‌ ಪದ್ಮನಾಭ ನಾೖಕ್‌ ಮತ್ತು ಜೊತೆಕಾರ್ಯದರ್ಶಿಗಳಾಗಿ ಸುರೇಶ್‌ ನಾೖಕ್‌, ಚಂದ್ರಶೇಖರ್‌ ನಾೖಕ್‌ ಕೆಳಗಿನ ಜಾಲು, ಸುನಿಲ್‌ ಪಾಂಡಿ ಮತ್ತು ಪ್ರದೀಪ್‌ ಬೆಳ್ಳೂರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಸಮಿತಿಯ ಇತರ ಸದಸ್ಯರನ್ನು ಆಯ್ಕೆಮಾಡಲಾಗಿದ್ದು, ಧರ್ಮದೈವ ನೇಮೋತ್ಸವವು 2024 ಏಪ್ರಿಲ್‌ 2 ರಿಂದ 4ರವರೆಗೆ ವಿಜ್ರಂಭಣೆಯಿಂದ ಜರಗಲಿದೆ.

LEAVE A REPLY

Please enter your comment!
Please enter your name here