ಭಯೋತ್ಪಾದನ ಸಂಘಟನೆ ಜೊತೆ ಸಂಪರ್ಕ ಆರೋಪ – ನಾಳೆ (ಡಿ.8)ವಿ.ಹಿಂ.ಪ, ಬಜರಂಗದಳದಿಂದ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು

0

ಪುತ್ತೂರು: ಅಂತರಾಷ್ಟ್ರೀಯ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯ ಜೊತೆ ವೇದಿಕೆ ಹಂಚಿಕೊಂಡು ಅವರುಗಳ ನೇತೃತ್ವದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದನ್ನು ಬಜರಂಗದಳ ಖಂಡಿಸುತ್ತದೆಯಲ್ಲದೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತ್ತಡ್ಕ ತಿಳಿಸಿದ್ದಾರೆ.


ಮುಖ್ಯಮಂತ್ರಿಯವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಮುಸಲ್ಮಾನ ಸಮಾಜಕ್ಕೆ ಹತ್ತು ಸಾವಿರ ಕೋಟಿ ಹಣವನ್ನು ಅನುದಾನ ನೀಡುತ್ತೇನೆಂದು ಹೇಳಿದ್ದು ಕರ್ನಾಟಕದ ಮುಖ್ಯಮಂತ್ರಿ ಭಯೋತ್ಪಾದನೆಗೆ ಹಣಕಾಸು ವ್ಯವಸ್ಥೆ ಮಾಡುವ ವ್ಯಕ್ತಿಯೇ ಎಂದು ಸಂಶಯ ವ್ಯಕ್ತವಾಗುತ್ತಿದೆ. ಮತ್ತು ನಮ್ಮ ತೆರಿಗೆ ಹಣವನ್ನು ಈ ರೀತಿ ತುಷ್ಟಿಕರಣಕ್ಕೋಸ್ಕರ ಮಾತನಾಡುವುದು,ಅನುದಾನ ಘೋಷಣೆ ಮಾಡುವುದು ಬಹುಸಂಖ್ಯಾತ ಹಿಂದುಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ವಿಶ್ವಹಿಂದು ಪರಿಷದ್ ಬಜರಂಗದಳ ಸಂಫಟನೆ ಡಿ.8 ರಂದು ರಾಜ್ಯಪಾಲರ ಬಳಿ ದೂರುನೀಡಿ ಕ್ರಮಕೈಗೊಳ್ಳಲು ಆಗ್ರಹಿಸಲಾಗುವುದು.ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡಿ ,ಈ ರೀತಿಯ ವರ್ತನೆಯನ್ನು ನಿಲ್ಲಿಸಲು ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here