ನಗರ ಸಭಾ ಉಪ ಚುನಾವಣೆ-ನಗರ ಕಾಂಗ್ರೆಸ್ ವತಿಯಿಂದ ವಾರ್ಡ್ ಮುಖಂಡರ ತುರ್ತು ಸಭೆ

0

ಉಪಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮ ಅಗತ್ಯ- ಹೆಚ್.ಮಹಮ್ಮದ್ ಆಲಿ
ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ – ಎಂ.ಬಿ.ವಿಶ್ವನಾಥ ರೈ

ಪುತ್ತೂರು: ನಗರ ಸಭೆಯ ಎರಡು ವಾರ್ಡ್‌ಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಕುರಿತು ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ನಗರ ಕಾಂಗ್ರೆಸ್ ವತಿಯಿಂದ ವಾರ್ಡ್ 1, ಹಾಗೂ 11 ರ ಕಾರ್ಯಕರ್ತರ ಹಾಗೂ ಮುಖಂಡರುಗಳ ಸಭೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.


ಉಪಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮ ಅಗತ್ಯ:
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಅವರು ಮಾತನಾಡಿ ನಗರ ಸಭೆಯ ಎರಡು ವಾರ್ಡ್‌ಗಳಿಗೆ ಚುನಾವಣೆ ಘೋಷಣೆ ಆಗಿದೆ, ಈ ಎರಡು ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲೇ ಬೇಕು, ವಿದ್ಯಾವಂತರು ಮತ್ತು ಪ್ರಜ್ಞಾವಂತರು ಹೆಚ್ಚು ಇರುವ ವಾರ್ಡ್ ಇದಾಗಿರುತ್ತದೆ ಆದುದರಿಂದ ಯಾವುದೇ ಕಳಂಕವಿಲ್ಲದ, ಜನ ಸಾಮಾನ್ಯರೊಂದಿಗೆ ಬೆರೆಯುವ ಹಾಗೂ ಅದರಲ್ಲೂ ಜನರು ಒಪ್ಪುವಂತ ಒಳ್ಳೆಯ ಕಾರ್ಯಕರ್ತರನ್ನು ನಾವು ಅಭ್ಯರ್ಥಿಯಾಗಿ ನಿಲ್ಲಿಸಬೇಕಾಗುತ್ತದೆ. ಉಪಚುನಾವಣೆಗಳು ಬೇರೆ ಚುನಾವಣೆ ತರ ಅಲ್ಲ,ಈ ಚುನಾವಣೆಯಲ್ಲಿ ಕಾರ್ಯಕರ್ತರು ತುಂಬಾ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.


ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಯವರು ಮಾತನಾಡಿ ವಾರ್ಡ್ ಅಭ್ಯರ್ಥಿ ಆಕಾಂಕ್ಷಿಗಳು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಅರ್ಜಿ ಸಲ್ಲಿಸಬೇಕು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುವುದು, ಶಾಸಕರಲ್ಲಿ ಸಮಾಲೋಚನೆ ಮಾಡಿ ಯೋಗ್ಯ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗುವುದು ಎಂದು ಹೇಳಿದರು. ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಮಾತನಾಡಿದರು. ಸಭೆಯಲ್ಲಿ ಯಂಗ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಂಜಿತ್ ಬಂಗೇರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಸಭಾ ಸದಸ್ಯ ರೋಬಿನ್ ತಾವ್ರೊ, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಮುಕೇಶ್ ಕೆಮ್ಮಿ೦ಜೆ, ರಶೀದ್ ಮುರ, ದಿನೇಶ್ ಕೆ ಶೇವಿರೆ, ಸೈಮನ್ ಗೊನ್ಸಲ್ವಿಸ್ ಕೃಷ್ಣನಗರ, ಕಾಂಗ್ರೆಸ್ ಮುಖಂಡರುಗಳಾದ ಇಸ್ಮಾಯಿಲ್ ಸಾಲ್ಮರ ಕಲಾವಿದ ಕೃಷ್ಣಪ್ಪ, ನವೀನ್ ನಾಯ್ಕ್ ನೆಹರುನಗರ, ಬೂತ್ ಅಧ್ಯಕ್ಷರುಗಳಾದ ರೋಹಿತ್ ನೆಲ್ಲಿಕಟ್ಟೆ, ಅಲ್ಫೋನ್ಸ್,ಎ ಪಿ ಎಂ ಸಿ ರಸ್ತೆ, ಬೆಳಿಯಪ್ಪ ಪೂಜಾರಿ ಸೂತ್ರಬೆಟ್ಟು, ಸುದೇಶ್ ಕೊಂಬೆಟ್ಟು ಹಾಗೂ ದೇವಿ ಪ್ರಸಾದ್ ನೆಲ್ಲಿಕಟ್ಟೆ, ಶಶಿಕಾಂತ್ ನೆಲ್ಲಿಕಟ್ಟೆ, ಬಾಲಕೃಷ್ಣ ನಾಯ್ಕ್ ನೆಲ್ಲಿಕಟ್ಟೆ, ನವೀನ್ ಗೌಡ ಶೇವಿರೆ, ಶಬೀರ್ ಶೇವಿರೆ, ಹರಿ ಪ್ರಸಾದ್ ಶೇವಿರೆ, ಕುಮಾರ ಶಿವನಗರ ಮೊದಲಾದವರು ಉಪಸ್ಥಿತರಿದ್ದರು. ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ದಾಮೋದರ ಭಂಡಾರ್ಕರ್ ಸ್ವಾಗತಿಸಿ, ಉಪಾಧ್ಯಕ್ಷ ದಿನೇಶ ಕಾಮತ್ ಸಾಮೆತಡ್ಕ ವಂದಿಸಿದರು.

LEAVE A REPLY

Please enter your comment!
Please enter your name here