ಯಕ್ಷಗಾನ ಕಲಾವಿದ ದಾಸಪ್ಪ ರೈ ರಿಗೆ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಅವಾರ್ಡ್

0

ಪುತ್ತೂರು: ಆತ್ಮಾಲಯ ಅಕಾಡಮಿ ಬೆಂಗಳೂರು ಇದರ ಮುಖ್ಯಸ್ಥೆ ಡಾ.ಪದ್ಮಜ ಸುರೇಶ್ ನೇತೃತ್ವದಲ್ಲಿ ವಾರ್ಷಿಕವಾಗಿ ಪ್ರದಾನ ಮಾಡುವ 2023 ರ ಶ್ರೀ ಶಾಂತ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಅವಾರ್ಡ್‌ ಗೆ ತೆಂಕು ತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಸಂಘಟಕ ಯಚ್.ದಾಸಪ್ಪ ರೈ ಆಯ್ಕೆಯಾಗಿದ್ದಾರೆ.


ಡಿ. 9 ರಂದು ಬೆಂಗಳೂರಿನ ಯವನಿಕ ಯುತ್ ಸೆಂಟ್ರಲ್, ನೃಪತುಂಗದಲ್ಲಿ ಜರಗುವ ಕಾರ್ಯಕ್ರಮದಲ್ಲಿ ರೂ 30,000ನಗದಿನೊಂದಿಗೆ ದಾಸಪ್ಪ ರೈ ಪ್ರಶಸ್ತಿ ಪಡೆಯಲಿದ್ದಾರೆ. ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ್ ಬಾರ್ಯರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ವಾನ್ ಗಾನ ಕೇಸರಿ ಕುದುಮಾರ್ ವೆಂಕಟ್ರಮಣ , ಖ್ಯಾತ ಯಕ್ಷಗಾನ ಹಾಸ್ಯಗಾರ ಪೆರುವಡಿ ನಾರಾಯಣ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್ , ಕುಂಬ್ಳೆ ಶ್ರೀಧರ ರಾವ್ ಸಂಗೀತ ಮತ್ತು ಯಕ್ಷಗಾನ ಕ್ಷೇತ್ರಗಳ ಸಾಧನೆಗಾಗಿ ಈ ಪ್ರಶಸ್ತಿ ಪುರಸ್ಕೃತರಾಗಿದ್ದರು.

LEAVE A REPLY

Please enter your comment!
Please enter your name here