ನರೇಂದ್ರ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸ ಮಾಲಿಕೆ -ಅಯೋಧ್ಯಾ ರಾಮ

0

ಪುತ್ತೂರು: ಶ್ರೀರಾಮ ಜನ್ಮಭೂಮಿಯ ಪಾವಿತ್ರ್ಯ , ಸಾಂಸ್ಕೃತಿಕ,ಧಾರ್ಮಿಕ ಮೆರುಗನ್ನು ಮರಳಿ ಪಡೆಯುವ ಯಶಸ್ವಿ ಹೋರಾಟದ ವೀರಗಾಥೆಯ ಅಮರಗಾನ ಇಂದು ಅಯೋಧ್ಯೆಯಲ್ಲಿ ಪ್ರತಿಧ್ವನಿಸುತ್ತಿದೆ. ಅಯೋಧ್ಯೆಯ ರಾಮ ಮಂದಿರವು ನಂಬಿಕೆ ,ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.ಇದು ಸತ್ಯ ,ನ್ಯಾಯ ಮತ್ತು ಸದಾಚಾರದ ವಿಜಯವನ್ನು ಸೂಚಿಸುತ್ತದೆ. ಎಂದು ಶ್ರೀದೇವಿ ವಿದ್ಯಾಕೇಂದ್ರ ಪುಣಚ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಶ್ಯಾಮ ನೀರ್ಕಜೆ ಇವರು ಹೇಳಿದರು.


ಪುತ್ತೂರಿನ ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ ರಾಮನ ವ್ಯಕ್ತಿತ್ವದ ಸಮಗ್ರ ವರ್ಣನೆಯ ಉಪನ್ಯಾಸ ಮಾಲಿಕೆ ಅಯೋಧ್ಯಾ ರಾಮ ಕಾರ‍್ಯಕ್ರಮದಲ್ಲಿ , ಅಯೋಧ್ಯೆಯಲ್ಲಿನ ಕರಸೇವೆಯ ಸಾಹಸಗಾಥೆ ಎಂಬ ವಿಚಾರವಾಗಿ ಅವರು ಮಾತನಾಡಿದರು.
ಅಯೋಧ್ಯೆಯು ಕೇವಲ ಐತಿಹಾಸಿಕ ಸ್ಥಳವಲ್ಲ .ಆಧ್ಯಾತ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳ ಕೇಂದ್ರಬಿಂದುವಾಗಿದೆ.ಆಕ್ರಮಣಗಳು ಮತ್ತು ಸಾಮಾಜಿಕ-ರಾಜಕೀಯ ಬದಲಾವಣೆಗಳು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ರಾಮಭಕ್ತರಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮರಳಿ ಪಡೆಯುವ ಹೋರಾಟದ ಕಿಚ್ಚು ಭುಗಿಲೇಳುತ್ತಲೇ ಇತ್ತು.ಲಕ್ಷಾಂತರ ಕರಸೇವಕರು ರಾಮಮಂದಿರ ನಿರ್ಮಾಣದ ಸಂಕಲ್ಪದಿಂದ ಹೋರಾಟ ಮಾಡಿದ ಸಂದರ್ಭದಲ್ಲಿ ಅಯೋಧ್ಯೆಗೆ ಹೋಗುವಾಗ ದಾರಿಯ ಕಲ್ಲುಮುಳ್ಳುಗಳ ಮೇಲೆ ನಡೆದು ಉಪವಾಸ, ಕಷ್ಟ, ನೋವುಗಳನ್ನು ಸಹಿಸಿಕೊಂಡು ನಿರ್ಧಾರ ಬಲಗೊಳಿಸಿ ಹೋರಾಟಕ್ಕಾಗಿ ಮುನ್ನುಗ್ಗಿದ ರಾಮಸೇವಕರ ಆ ಕನಸು ನನಸಾಗುವ ಕ್ಷಣ ಈಗ ಒದಗಿಬಂದಿದೆ. ಎಂದು ಹೇಳಿದರು.


ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಎಲ್ಲೆಡೆ ನಡೆದ ಹೋರಾಟ, ರಾಮರಥಯಾತ್ರೆಗಳು, ಅಯೋಧ್ಯೆ ಚಲೋ ಮತ್ತು ಕರಸೇವೆಗಳಲ್ಲಿ ಭಾಗವಹಿಸಿದ ಅವಿಸ್ಮರಣೀಯ ಅನುಭವವನ್ನು ಹಂಚಿಕೊಂಡರು.ವೇದಿಕೆಯಲ್ಲಿ ಪುತ್ತೂರಿನ ಉದ್ಯಮಿಗಳಾದ ದೀಪಾ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here