ಸುದಾನ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಪನ್ನ

0

ದೀಪ್ತಿ ತಂಡ ಚಾಂಪಿಯನ್, ಜ್ಯೋತಿ ತಂಡ ರನ್ನರ್ಸ್

ಪುತ್ತೂರು:ನೆಹರುನಗರದಲ್ಲಿನ ಸುದಾನ ವಿದ್ಯಾಸಂಸ್ಥೆಯ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಇದರ ಸಮಾರೋಪ ಸಮಾರಂಭವು ಡಿ.8 ರಂದು ಜರಗಿತು.ಕ್ರೀಡಾಕೂಟದಲ್ಲಿ ದೀಪ್ತಿ ತಂಡ ಚಾಂಪಿಯನ್ ಎನಿಸಿಕೊಂಡಿದ್ದು, ಜ್ಯೋತಿ ತಂಡ ರನ್ನರ್ಸ್ ಆಗಿ ಹೊರ ಹೊಮ್ಮಿತು. ಸ್ಫೂರ್ತಿ ತಂಡ ತೃತೀಯ ಸ್ಥಾನ ಪಡೆದರೆ ಕೀರ್ತಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಎಸ್.ಬಿ.ಐ ಬ್ಯಾಂಕಿನ ಹಿರಿಯ ಸಹಾಯಕಿ ಜೆಸ್ಸಿ ಜೋನ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿದಾಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೊಳ್ಳುತ್ತದೆ. ಕ್ರೀಡೆಯನ್ನು ನಿರ್ಲಕ್ಷಿಸಬೇಡಿ. ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರ ಹೊಮ್ಮಿ ಎಂದರು.


ಸಿಬ್ಬಂದಿ ಹಗ್ಗ-ಜಗ್ಗಾಟ ಸ್ಪರ್ಧೆ:
ಶಾಲೆಯ ಮಹಿಳೆಯರ ಹಾಗೂ ಪುರುಷರ ಸಿಬ್ಬಂದಿ ವರ್ಗ ಹಾಗೂ ಸೀನಿಯಯರ್ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ನಡುವೆ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದ ಪುರುಷರ ಹಾಗೂ ಮಹಿಳೆಯರ ಸಿಬ್ಬಂದಿ ತಂಡಕ್ಕೆ ಬಹುಮಾನ ವಿತರಿಸಲಾಯಿತು.

ಅವರೋಹಣ/ತೆರೆ:
ಆರಂಭದಲ್ಲಿ ಶಾಲೆಯ ಕೀರ್ತಿ, ಜ್ಯೋತಿ, ಸ್ಫೂರ್ತಿ, ಶಕ್ತಿ, ದೀಪ್ತಿ ತಂಡದ ವಿದ್ಯಾರ್ಥಿಗಳು ಶಾಲಾ ಬ್ಯಾಂಡ್ ವಾದ್ಯದೊಂದಿಗೆ ಸಮಾರೋಪದ ಪಥ ಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ಬಳಿಕ ಕ್ರೀಡಾ ಧ್ವಜದ ಆವರೋಹಣ ಹಾಗೂ ಕ್ರೀಡಾಂಗಣದ ಬಳಿಯಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಅಗ್ನಿ ಪೀಠದಲ್ಲಿ ಉರಿಸಿರಿಸಲಾಗಿದ್ದ ಅಗ್ನಿಯನ್ನು ಆರಿಸಿ ಕ್ರೀಡಾಕೂಟಕ್ಕೆ ತೆರೆ ಎಳೆಯಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸಪ್ನಾ ಸೂರಜ್ ನಾಯರ್, ಮಾಜಿ ಅಧ್ಯಕ್ಷ ರಾಘವೇಂದ್ರ ನಾಯಕ್,ದೈಹಿಕ ಶಿಕ್ಷಣ ಶಿಕ್ಷಕ ಪುಷ್ಪರಾಜ್, ಕ್ರೀಡಾ ಮಂತ್ರಿ ಸೃಜನ್ ಎಸ್.ಜಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಬಳಗ ಪ್ರಾರ್ಥಿಸಿದರು. ಕ್ರೀಡಾ ಮಂತ್ರಿ ನಿಹಾರಿಕಾ ಎನ್.ರೈ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ವಂದಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಶಿಕ್ಷಕರಾದ ಹರ್ಷಿತಾ ನಾಯ್ಕ್, ಸುಜಾತಾ ಎಸ್ ಶೆಟ್ಟಿ
ವಾಚಿಸಿದರು. ಶಿಕ್ಷಕಿಯರಾದ ಜಯಸ್ಮಿತಾ ಹಾಗೂ ಹರ್ಷಿತಾರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು.

ವಿಜೇತರು…
*ಸೀನಿಯರ್ ಹುಡುಗರ ವಿಭಾಗ:ವಿಘ್ನೇಶ್ ಸಿ.ರೈ(ಜ್ಯೋತಿ)
*ಸೀನಿಯರ್ ಹುಡುಗಿಯರ ವಿಭಾಗ:ನಿಹಾರಿಕಾ ಎನ್.ರೈ ಹಾಗೂ ಸಿಯಾ ಎಸ್(ಜ್ಯೋತಿ)
*ಜ್ಯೂನಿಯರ್ ಹುಡುಗರ ವಿಭಾಗ:ಗಗನ್ ಎ.ಜಿ(ದೀಪ್ತಿ)
*ಜ್ಯೂನಿಯರ್ ಹುಡುಗಿಯರ ವಿಭಾಗ:ಸಮೃದ್ಧಿ(ಸ್ಫೂರ್ತಿ)
*ಸಬ್ ಜ್ಯೂನಿಯರ್ ಹುಡುಗರ ವಿಭಾಗ:ಮೊಹಮದ್(ಸ್ಫೂರ್ತಿ)
*ಸಬ್ ಜ್ಯೂನಿಯರ್ ಹುಡುಗಿಯರ ವಿಭಾಗ:ಲೊಸಿನ್(ಸ್ಫೂರ್ತಿ)

ಪಥ ಸಂಚಲನ ವಿಜೇತರು..
*ಬೆಸ್ಟ್ ಕಮಾಂಡರ್-ಪ್ರಣವ್ ಆಚಾರ್ಯ(ಜ್ಯೋತಿ)
*ಬೆಸ್ಟ್ ಮಾರ್ಚರ್:
-ಸೀನಿಯರ್ ಹುಡುಗರ/ಹುಡುಗಿಯರ ವಿಭಾಗ: ಮೊಹಮದ್ ಮುಹಿಜ್(ಸ್ಫೂರ್ತಿ)/ಸಿಯಾ ಎಸ್(ಜ್ಯೋತಿ)
–ಜ್ಯೂನಿಯರ್ ಹುಡುಗರ/ಹುಡುಗಿಯರ ವಿಭಾಗ: ಶರನ್ ಜೋಯ್ಸ್ಟರ್(ದೀಪ್ತಿ)/ಧೃತಿ ವಿ.ಶೆಟ್ಟಿ (ದೀಪ್ತಿ)
–ಸಬ್ ಜ್ಯೂನಿಯರ್ ಹುಡುಗರ/ಹುಡುಗಿಯರ ವಿಭಾಗ: ಅನಿಲ್ ಕೃಷ್ಣ(ದೀಪ್ತಿ)/ಇಂಪನಾ ಸಿ.ಭಟ್(ಸ್ಫೂರ್ತಿ)

LEAVE A REPLY

Please enter your comment!
Please enter your name here