ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲದ 2ನೇ ವರ್ಷದ ಸಂಭ್ರಮ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ನೆಹರು ನಗರ ಇದರ 2ನೇ ವರ್ಷದ ಶ್ರೀ ಕೃಷ್ಣ ಯುವಕ ಮಂಡಲ ಸಂಭ್ರಮ ಕಾರ್ಯಕ್ರಮ ನ.26ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮ ದಲ್ಲಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಟ್ಲ ಆರ್.ಎಂ.ಎಸ್.ಎ. ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅನ್ನಪೂರ್ಣ, ಪುತ್ತೂರು ಸುದಾನ ನೆಹರುನಗರ ವಸತಿಯುತ ಶಾಲೆ ಸಂಚಾಲಕ ರೆ|ಫಾ|ವಿಜಯ ಹಾರ್ವಿನ್, ಮುಖ್ಯ ಅತಿಥಿಗಳಾದ ಮಾಯ್ ದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಲಾರೆನ್ಸ್ ಮಸ್ಕರೇನಸ್,ಭಾರತೀಯ ವಾಯುಸೇನೆಯ ಡಿ.ಎಸ್.ನಿವೃತ್ತ ಸರ್ಜಂಟ್ ಗಣೇಶ್, ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್, ಪುತ್ತೂರು ನಿಸರ್ಗ ಗಣೇಶ್ ಭಾಗ್ ವಾಸು ನಾಯ್ಕ, ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಬಿ.ರಾಜೀವ ಗೌಡ, ಹಿರಿಯ ಕವಿ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಆಮಂತ್ರಣ ಪರಿವಾರದ ಸಂಸ್ಥಾಪಕ ವಿಜಯ ಕುಮಾರ್ ಜೈನ್‌, ರಕ್ತದಾನಿ, ಸಮಾಜಸೇವಕ ನವೀನ್, ಕಲಾಪ್ರತಿಭೆಗಳು ಉಪಸ್ಥಿತರಿದ್ದರು. ಕಲಾವಿದ ಕೃಷ್ಣಪ್ಪ ಸ್ವಾಗತಿಸಿ, ಕವಯಿತ್ರಿ ಅಪೂರ್ವ ಕಾರಂತ್ ಕಾರ್ಯಕ್ರಮ ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here