ನರಿಮೊಗರು ಸರಸ್ವತಿ ವಿದ್ಯಾ ಮಂದಿರದಲ್ಲಿ ವಾರ್ಷಿಕ ಕ್ರೀಡಾಕೂಟ

0

ನರಿಮೊಗರು: ನರಿಮೊಗರು ಸರಸ್ವತಿ ವಿದ್ಯಾ ಮಂದಿರದ 2023-24ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ರೀಡಾಕೂಟ ನಡೆಯಿತು. ಶಿಕ್ಷಣ ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಕ್ರೀಡಾಕೂಟವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು. ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ  ಶೋಭಾ, ಪೋಷಕರಾದ ಸತೀಶ್ ಪುಣಿಂಚಿತ್ತಾಯ,  ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ, ಆಡಳಿತಾಧಿಕಾರಿ  ಶುಭಾ ಅವಿನಾಶ್, ಮುಖ್ಯಗುರು ದಿವ್ಯ ಹಾಗೂ ಶಾಲಾ ಶೈಕ್ಷಣಿಕ ಸಂಯೋಜಕರಾದ ರಾಜಾರಾಮ ನೆಲ್ಲಿತ್ತಾಯ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶ್ರೀಕೃಷ್ಣ ಶಗ್ರಿತ್ತಾಯ ಪುಂಡಿಕಾಯಿ ಇವರು ನೂತನವಾಗಿ ನಿರ್ಮಿಸಲಾದ ಶಾಲಾ ಕ್ರೀಡಾ ಕೊಠಡಿಯನ್ನು ದೀಪ ಬೆಳಗಿಸಿ ಶುಭಾರಂಭ ಮಾಡಿದರು. ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಹಾಗೂ ಪೋಷಕರು ಸಹಕರಿಸಿದರು. ಮುಖ್ಯಗುರು ದಿವ್ಯ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಎಂ. ವಂದಿಸಿದರು. ಹರ್ಷಿಣಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here