ವಿಟ್ಲ: ಮದ್ಯ ಖರೀದಿಗೆ ಬಂದವ ಮೊಬೈಲ್ ಎಗರಿಸಿದ – ಕಳ್ಳನ‌ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

0

ವಿಟ್ಲ: ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬರು ವೈನ್ ಶಾಪ್ ನಲ್ಲಿದ್ದ ಮೊಬೈಲ್ ಅನ್ನು ಎಗರಿಸಿದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಟ್ಲದ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ಗೆ ವ್ಯಕ್ತಿಯೊಬ್ಬರು ಮದ್ಯ ಖರೀದಿಸಲು ಬಂದಿದ್ದರು. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ವೈನ್ ಶಾಪ್ ನ ಸಿಬ್ಬಂದಿ ರಾಜೇಶ್ ಎಂಬವರ ಮೊಬೈಲ್ ನ್ನು ಚಾಲಾಕಿತನದಿಂದ ಎಗರಿಸಿ ಬ್ಯಾಗ್ ಗೆ ತುಂಬಿಸಿರುವ ಕಳ್ಳನ ಕೈಚಳಕ ಅಂಗಡಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here