ಜ.25: ಮೊಟ್ಟೆತ್ತಡ್ಕ-ಮಣ್ಣಾಪು ಕೊರಗಜ್ಜ ದೈವದ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ-ಪೂರ್ವಭಾವಿ ಸಭೆ

0

ನೇಮೋತ್ಸವವು ಎಲ್ಲರ ಸಹಕಾರದಂತೆ ಯಶಸ್ವಿಯಾಗಿ ನೆರವೇರಲಿ – ರವೀಂದ್ರ ಶೆಟ್ಟಿ

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಜ.25 ರಂದು ವಾರ್ಷಿಕ ನೇಮೋತ್ಸವ ಜರಗಲಿದ್ದು, ಇದರ ಪೂರ್ವಭಾವಿ ಸಭೆಯು ಡಿ.10 ರಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಸಂಜೆ ನೆರವೇರಿತು.

ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ, ಕೊರಗಜ್ಜರ ಆಶೀರ್ವಾದದಿಂದ ದಾನಿಗಳ, ಭಕ್ತರ ನೆರವಿನಿಂದ ಶ್ರೀ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಶ್ರೀ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಪರಸ್ಪರ ಸಹಕಾರ, ತಾಳ್ಮೆ ಅಗತ್ಯ. ಮಕರ ಸಂಕ್ರಮಣದಂದು ಸಾಕಷ್ಟು ಅಗೇಲು ಸೇವೆ ನಡೆಯುತ್ತಿರುವುದು ಕ್ಷೇತ್ರದ ಪಾವಿತ್ರ್ಯತೆ ತಿಳಿಸುತ್ತದೆ. ಕಳೆದ ವರ್ಷವೂ ಶ್ರೀ ಕ್ಷೇತ್ರದಲ್ಲಿ ನೇಮೋತ್ಸವವು ವೈಭವದಿಂದ ಜರಗಿದ್ದು ಅಷ್ಟ ಧಿಕ್ಕುಗಳಿಂದ ಆಗಮಿಸಿದ ಜನಸಾಗರವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯುತ್ತಿರುವ ನೇಮೋತ್ಸವವು ಎಲ್ಲರ ಸಹಕಾರದಂತೆ ಯಶಸ್ವಿಯಾಗಿ ನೆರವೇರಲಿ ಎಂದರು.

ಈ ಸಂದರ್ಭದಲ್ಲಿ ಷಷ್ಠಿ ಕಳೆದ ಬಳಿಕ ಮತ್ತೊಮ್ಮೆ ಸಭೆ ನಡೆಸುವುದು, ಅದರಲ್ಲಿ ಆಮಂತ್ರಣ ಪತ್ರಿಕೆ ರಚನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ, ಸಭಾ ಕಾರ್ಯಕ್ರಮ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ದೈವದ ಪ್ರಧಾನ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಕೆ.ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಉಮೇಶ್ ಮಣ್ಣಾಪು, ಕೋಶಾಧಿಕಾರಿ ಗುರುವ ಮಣ್ಣಾಪು, ಬಾಬು ಮಣ್ಣಾಪು, ಲೋಕೇಶ್ ಮಣ್ಣಾಪು, ಚೆನ್ನಪ್ಪ ಗೌಡ, ಗೌರವ ಸಲಹೆಗಾರರಾದ ವಿಶ್ವನಾಥ ನಾಯ್ಕ ಅಮ್ಮುಂಜ ಹಾಗೂ ಗಂಗಾಧರ ಮಣ್ಣಾಪು, ಸುಜಿರ್ ಶೆಟ್ಟಿ ನುಳಿಯಾಲು, ಬಂಗಾರ್ ಕಲಾವಿದರು ಪುರುಷರಕಟ್ಟೆಯ ಗಣೇಶ, ಶ್ರೀ ರಾಂ ಫ್ರೆಂಡ್ಸ್ ಪಂಜಳದ ಸದಸ್ಯರು ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here