ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಂಭ್ರಮಕ್ಕೆ ಧ್ವಜಾರೋಹಣದ ಮೂಲಕ ಚಾಲನೆ

0

ಸಂಸ್ಥಾಪಕ ವಂ| ಆಂಟನಿ ಪತ್ರಾವೋ ಅವರ ಮೌಲ್ಯಾಧಾರಿತ ಶಿಕ್ಷಣದ ಕೊಡುಗೆ ಮಾದರಿ – ವಂ| ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು: ಚರ್ಚ್‌ನಲ್ಲಿ 36 ವರ್ಷಗಳ ಕಾಲ ಧರ್ಮಗುರುಗಳಾಗಿದ್ದು, ಪುತ್ತೂರಿನಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದ್ಯಾನವನ್ನು ಕೊಡಲು ಕಾರಣಕರ್ತರಾದ ಪೂಜ್ಯ ಗುರು ಸಂಸ್ಥಾಪಕ ವಂ|ಆಂಟನಿ ಪತ್ರಾವೂ ಅವರಿಂದ ಈ ವಿದ್ಯಾಸಂಸ್ಥೆಗಳಿಗೆ ಮೌಲ್ಯಾಧಾರಿತ ಶಿಕ್ಷಣದ ಕೊಡುಗೆ ಮಾದರಿಯಾಗಿದೆ. ಅವರ ಜನ್ಮ ದಿನದ ಈ ಸಂರ್ಭದಲ್ಲಿ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಂಭ್ರಮಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ನೀಡಿದ್ದೇವೆ ಎಂದು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಧರ್ಮಗುರು ವಂ ಲಾರೆನ್ಸ್ ಮಸ್ಕರೇನ್ಹಸ್ ಅವರು ಹೇಳಿದರು.

ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾಷಿಕೋತ್ಸವದ ಸಮಾರಂಭದ ಆರಂಭದ ಅಂಗವಾಗಿ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಡಿ.11ರಂದು ಅವರು ಕಾರ್ಯಕ್ರಮದ ಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಆಶೀರ್ವದಿಸಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳು ಇನ್ನು 15 ದಿನಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ವಾರ್ಷಿಕೋತ್ಸವ ಪ್ರಮುಖ ಅಂಗವಾಗಿದ್ದು, ಬೆಳಿಗ್ಗೆ ದೇವಳದಲ್ಲಿ ಕೃತಜ್ಞತಾ ಬಲಿ ಪೂಜೆ ಅರ್ಪಿಸಿ, ಈ ಕಾರ್ಯಕ್ರಮಗಳ ಯಶಸ್ವಿಗೆ ದೇವರಲ್ಲಿ ಪ್ರಾರ್ಥಿಸಿದ್ದೇವೆ. ನಮ್ಮೆಲ್ಲರ ಪೂಜ್ಯ ಗುರು ಸಂಸ್ಥಾಪಕ ಆಂಟನಿ ಪತ್ರಾವೂ ಅವರ ಜನ್ಮ ದಿನದ ಆಚರಣೆಯು ಇವತ್ತೇ ಆಗಿದ್ದು, ಅವರನ್ನು ಕೃತಜ್ಞತಾ ಪೂರಕವಾಗಿ ಸ್ಮರಿಸುತ್ತೇವೆ. ಅವರು ನೀಡಿದ ಕೊಡುಗೆ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅವರಿಗೆ ಚಿರಶಾಂತಿ ಕೋರುತ್ತಾ ಅವರ ಕನಸ್ಸನ್ನು ಇನ್ನಷ್ಟು ಅತಿ ಎತ್ತರಕ್ಕೆ ಕೊಂಡೊಯ್ದು ನನಸು ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೆವೆ ಎಂದ ಅವರು ಶಾಲಾ ವಾರ್ಷಿಕೋತ್ಸವದಲ್ಲಿ ದೇವರು ಕೊಟ್ಟ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶ, ಇಲ್ಲಿ ಹೆತ್ತವರು, ಶಿಕ್ಷಕರು, ಎಲ್ಲರು ಜೊತೆ ಸೇರಿಕೊಂಡು ಆಚರಿಸುವ ಸಂಭ್ರಮ ಎಂದರು. ಸಂಸ್ಥೆಯ ವಿದ್ಯಾರ್ಥಿನಿಯರ ಆಕರ್ಷ ಬ್ಯಾಂಡ್ ಸೆಟ್ ಪಥಸಂಚಲನದೊಂದಿಗೆ ಧರ್ಮಗುರುಗಳನ್ನು ಧ್ವಜಾರೋಹಣದ ವೇದಿಕೆಯತ್ತ ಕರೆ ತಂದು ಗೌರವಿಸಲಾಯಿತು. ಈ ಸಂದರ್ಭ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಫಾ| ಸ್ಟ್ಯಾನಿಪಿಂಟೊ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ, ಸಂತ ವಿಕ್ಟರ ಬಾಲಿಕಾ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯ ಕುಮಾರಿ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅಕ್ಷತಾ ಭಟ್, ಸಂತ ವಿಕ್ಟರ ಆಂಗ್ಲಮಾಧ್ಯಮ ಶಾಲೆಯ ಉಪಾಧ್ಯಕ್ಷ ಮಹೇಶ್ಚಂದ್ರ ಸಾಲಿಯಾನ್, ವಿಕ್ಟರ ಬಾಲಿಕ ಪ್ರೌಢಶಾಲೆಯ ಮುಖ್ಯಗುರು ರೋಸ್ಲೀನ್ ಸೇವಿಯೊ, ಮಾಯ್ ದೆ ದೇವುಸ್ ಶಾಲೆಯ ಮುಖ್ಯಗುರು ಡ್ಯಾನಿ ಡಿಸೋಜ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯರು, ಹ್ಯಾರಿ ಡಿ’ಸೋಜ, ಶಾಲಾ ವ್ಯವಸ್ಥಾಪನಾ ಸಮಿತಿ ಸದಸ್ಯರು, ಶಾಲಾ ರಕ್ಷಕ ಶಿಕ್ಷಕ ಕಾರ್ಯಕಾರಿಣಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕು.ಅಮೃತ ಸ್ವಾಗತಿಸಿದರು. ವಿದ್ಯಾಶಂಕರ್ ವಂದಿಸಿದರು.

LEAVE A REPLY

Please enter your comment!
Please enter your name here