ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ಸವಣೂರು ಇಲ್ಲಿಯ ವಾರ್ಷಿಕ ಕ್ರೀಡಾಕೂಟವು ಸವಣೂರುಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಬಳಿಕ ಮಾತನಾಡಿದ ಶೈಕ್ಷಣಿಕ ವರ್ಷದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೀಯ ಮಾತುಗಳ ಮೂಲಕ ಶುಭ ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಕಡಬ ತಾಲೂಕಿನ ನೂತನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರ ಭವಾನಿ ಶಂಕರ್ ಆಕರ್ಷಣೀಯ ಪಥ ಸಂಚಲನದ ಮೂಲಕ ಗೌರವಂದನೆಯನ್ನು ಸ್ವೀಕರಿಸಿ, ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಸಂಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗಾಗಿ ಶುಭವನ್ನು ಹಾರೈಸಿ ಕ್ರೀಡಾಂಗಣ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆಯ ಮಾತುಗಳನ್ನಾಡಿದರು.
ಕ್ರೀಡಾಕೂಟದ ಧ್ವಜಾರೋಹಣ ಕಾರ್ಯಕ್ರಮವನ್ನು ಉಭಯ ಸಂಸ್ಥೆಗಳ ಕಾರ್ಯಧ್ಯಕ್ಷ ಗಿರಿಶಂಕರ ಸುಲಾಯ ದೇವಸ್ಯ ನೆರವೇರಿಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪೂರ್ತಿಯ ಮಾತುಗಳ ಮೂಲಕ ಶುಭ ಹಾರೈಸಿದರು. ರಾಷ್ಟ್ರೀಯ ಕ್ರೀಡಾಪಟು ಅಕ್ರಮ ಸಕ್ರಮ ಸಮಿತಿ ಯು ಸದಸ್ಯ ರಾಕೇಶ್ ರೈ ಕೆಡಂಜಿ ಕ್ರೀಡೆಯ ಉದ್ದೇಶವನ್ನು ತಿಳಿಸಿ ಸದೃಢ ಭಾರತದ ನಿರ್ಮಾಣಕ್ಕೆ ಯುವಶಕ್ತಿಯ ಅಗತ್ಯತೆ ಇದೆ, ಆರೋಗ್ಯವಂತ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವಂತೆ ಕರೆಯನ್ನು ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷೆ ಜಯಶ್ರೀ, ಸವಣೂರು ಗ್ರಾ.ಪಂ, ಸದಸ್ಯರುಗಳಾದ ಶೀನಪ್ಪ ಶೆಟ್ಟಿ , ಚಂದ್ರಾವತಿ, ತೀರ್ಥರಾಮ ಕೆಡಂಜಿ, ಗ್ರಾಮ ಪಂಚಾಯಿತ್ ಸದಸ್ಯ ಮನ್ಮಥ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿ ಮುಳ್ಳು , ಎಸ್ ಡಿ ಎಂ ಸಿ ಅಧ್ಯಕ್ಷರಾಧಾಕೃಷ್ಣ,, ಪೋಷಕ ಪ್ರತಿನಿಧಿಗಳು ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಪದ್ಮಾವತಿ ಎನ್.ಪಿ. ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯ ಗುರುಗಳು ರಘು ಬಿ ಆರ್. ಸರ್ವರಿಗೂ ಕಾರ್ಯಕ್ರಮದ ಪ್ರಯುಕ್ತ ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಮಾಮಚನ್.ಎಂ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಿಶನ್ ಬಿ. ವಿ. ಉಪನ್ಯಾಸಕ ರಾಜೀವ ಶೆಟ್ಟಿ, ಹರಿ ಶಂಕರ ಕಾರ್ಯಕ್ರಮವನ್ನು ನಿರೂಪಿಸಿದರು. ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಎಲ್ಲಾ ಉಪನ್ಯಾಸಕರು ಶಿಕ್ಷಕ ವರ್ಗ, ಬೋಧಕೇತರ ಸಿಬ್ಬಂದಿಗಳು, ಮಾರ್ ಇವಾ ನ್ಯೂಸ್ ಬಿ ಎಡ್ ಕಾಲೇಜ್ ಕುಂತೂರು ಇಲ್ಲಿಯ ಪ್ರಶಿಕ್ಷಣಾರ್ಥಿಗಳು, ಪೋಷಕ ಪ್ರತಿನಿಧಿಗಳು, ಹಿರಿಯ ವಿದ್ಯಾರ್ಥಿಗಳು ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದರು