ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ‘ಬುರ್ಕಾ ತೆಗೆದು ಬನ್ನಿ’ ಎಂಬ ಸೂಚನಾ ಫಲಕ ವಿವಾದಕ್ಕೀಡಾದ ಮತ್ತು ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆಯ ಬಳಿಕ ಆಸ್ಪತ್ರೆಯಲ್ಲಿ ಹಾಕಿದ ಸೂಚನಾ ಫಲಕವನ್ನು ತೆರವುಗೊಳಿಸಲಾಗಿದೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಫಲಕ ಅಳವಡಿಸಲಾಗಿತ್ತು. ಕಳೆದ ಒಂದು ವರ್ಷಗಳ ಹಿಂದೆ ಈ ಫಲಕ ಅಳವಡಿಸಲಾಗಿತ್ತು. ಈ ಸೂಚನಾ ಫಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರವಿರೋಧದ ಚರ್ಚೆಗೆ ಕಾರಣವಾಯಿತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆಗೆ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿ ಸೂಚನಾ ಫಲಕ ತೆರವುಗೊಳಿಸಲಾಗಿದೆ.
ಚಿಕಿತ್ಸೆಯಲ್ಲೂ ಧರ್ಮ ಅಡ್ಡಿ:
ಬುರ್ಖಾ ತೆಗೆಯದೆ ಇಸಿಜಿ ಮಾಡೋದು ಹೇಗೆಂದು ಇದೀಗ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳು ಗೊಂದಲದಲ್ಲಿದ್ದಾರೆ.