ಬೆಟ್ಟಂಪಾಡಿ ಕಾಲೇಜಿನಲ್ಲಿ ‘ಪ್ರತಿಭಾನ್ವೇಷಣೆ 2023-24’ ಕಾರ್ಯಕ್ರಮ

0

ಗ್ರಾಮೀಣ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆ ಅಪಾರವಾದುದು – ನವೀನ್ ರೈ ಚೆಲ್ಯಡ್ಕ

ಪುತ್ತೂರು: ಗ್ರಾಮೀಣ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆ ಅಪಾರವಾದುದು. ಉತ್ತಮ ವೇದಿಕೆಗಳು ಹಾಗೂ ಅವಕಾಶಗಳು ಇದಕ್ಕೆ ಪೂರಕವಾದುದಾಗಿದೆ ಎಂದು ಬೆಟ್ಟಂಪಾಡಿ ಗ್ರಾಮಪಂಚಾಯತಿನ ಸದಸ್ಯ ನವೀನ್ ರೈ ಚೆಲ್ಯಡ್ಕ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ ನಡೆದ ‘ಪ್ರತಿಭಾನ್ವೇಷಣೆ 2023-24’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೆಟ್ಟಂಪಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಪದವಿ ಕಾಲೇಜು ಸ್ಥಾಪನೆಗೊಂಡು ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಸ್ಥಳವಾಗಿ, ಹಲವು ಪ್ರತಿಭೆಗಳ ಪ್ರಗತಿಗೆ ಹಾಗೂ ಅನೇಕ ಉತ್ತಮ ಸಾಮಾಜಿಕ ನಾಯಕರುಗಳ ಉಗಮಕ್ಕೆ ಕಾರಣವಾಗಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದರು.


ಕಾಲೇಜಿನ ಲಲಿತ ಕಲಾ ಸಂಘದ ಸಂಚಾಲಕ ಪ್ರೊ.ತಿಮ್ಮಯ್ಯ ಎಲ್ ಎನ್ ಇವರು ಪ್ರಾಸ್ತಾವಿಕ ನುಡಿಗಳನ್ನು ಆಡಿ, ಈ ವೇದಿಕೆಯು ಅನೇಕ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶವಾಗಲಿದೆ ಎಂದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಪ್ರೊ.ಮಾರಣ್ಣ ಇವರು 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ ಎಸ್, ಉಪನ್ಯಾಸಕ ವೃಂದದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ಸಂಚಾಲಕ ಪ್ರೊ. ತಿಮ್ಮಯ್ಯ ಎಲ್ ಎನ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕರಾದ ದರ್ಶನ್ ಬಿ ಡಿ ವಂದಿಸಿದರು. ಹರ್ಷಿತಾ. ಕೆ ಹಾಗೂ ರಮ್ಯಾಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here